ರಾಜ್ಯ

ಫೋನ್ ಕದ್ದಾಲಿಕೆ ಮಹಾ ಅಪರಾಧ: ಈ ಬಗ್ಗೆ ಮುಖ್ಯಮಂತ್ರಿಗೆ ದೂರು - ಆರ್.ಅಶೋಕ್

Shilpa D

ಬೆಂಗಳೂರು: ಫೋನ್ ಕದ್ದಾಲಿಕೆ ಮಹಾ ಅಪರಾಧ. ಈ ಪ್ರಕರಣ ಕ್ರಿಮಿನಲ್ ಅಪರಾಧ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಾನು ಒತ್ತಾಯಿಸುತ್ತೇನೆ. ರಾಜ್ಯ ಸರ್ಕಾರದ ಕಡೆಯಿಂದ  ತನಿಖೆ ಮಾಡಿದರೇ ಒತ್ತಡ ಬರುತ್ತೆ. ಹೀಗಾಗಿ ತಪ್ಪಿತಸ್ಥರ ಕ್ರಮಕ್ಕೆ ಸಿಬಿಐ ತನಿಖೆಯೇ ಆಗಬೇಕು ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಮುಖಂಡರ ಫೋನ್ ಕದ್ದಾಲಿಕೆಯಾಗಿದೆ ಎಂದು ಆರು ತಿಂಗಳ ಹಿಂದೆಯೆ ಹೇಳಿದ್ದೆ, ಅದು ಈಗ ಜಗಜ್ಜಾಹೀರಾಗಿದೆ, ರಾಜಕಾರಣಿಗಳು, ಪತ್ರಕರ್ತರು, ಪೊಲೀಸರು ಸೇರಿ ಅನೇಕರ ಫೋನ್ ಕದ್ದಾಲಿಕೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದೆ ಎಂದು ಆರೋಪಿಸಿದ್ದಾರೆ.

ಫೋನ್ ಕದ್ದಾಲಿಸುವುದು ದೊಡ್ಡ ಅಪರಾಧ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಲಾಗಿದೆ. ಫೋನ್ ಕದ್ದಾಲಿಕೆಗೆ ಶಿಕ್ಷೆ ನೀಡುವ ಅಧಿಕಾರ ಕಾನೂನಿನಲ್ಲಿ ಇದೆ. ಫೋನ್ ಕದ್ದಾಲಿಕೆ ಮಾಡಿದ ಸರ್ಕಾರ ಈಗ ಇಲ್ಲ, ಅದೇ ಸರ್ಕಾರ ಈಗಲೂ ಇದ್ದಿದ್ದರೆ ಸರ್ಕಾರವೇ ಉರುಳಿ ಹೋಗುವಂತ ಅಪರಾಧ ಇದು ಎಂದು ಹೇಳಿದರು. ಫೋನ್ ಕದ್ದಾಲಿಕೆಯನ್ನು ಈಗ ಪೊಲೀಸರೇ ಒಪ್ಪಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಫೋನ್ ಕದ್ದಾಲಿಕೆ ನಡೆದಿದೆ ಎಂದು ಅವರು ಆರೋಪಿಸಿದರು.

SCROLL FOR NEXT