ರಾಜ್ಯ

ಕಾರ್ಕಳ: ನಿಟ್ಟೆ  ಅರ್ಬಿ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋದ ಯುವಕ ನೀರುಪಾಲು

Raghavendra Adiga

ಕಾರ್ಕಳ: ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ ಬೋಳ ಕೃಷ್ಣಮೂಲ್ಯರ ಪುತ್ರ ಸುದೇಶ್ (26) ಮೃತಪಟ್ಟಿದ್ದರೆ ಆತನ ಸ್ನೇಹಿತ ಬೋಳ ಪದವು ಚರ್ಚ್ ಸಮೀಪದ ನಿವಾಸಿ ರಾಜು ಅವರ ಪುತ್ರ ರಾಕೇಶ್ (24) ಈಜಿ ದಡಸೇರಿದ್ದಾನೆ.

ಘಟನೆ ವಿವರ

ಸ್ವಾತಂತ್ರ ದಿನಾಚರಣೆ ಪ್ರಯುಕ್ತ ರಜೆ ಇದ್ದ ಕಾರಣ ಸುರೇಶ್, ರಾಕೇಶ್, ಭರತ್ ಹಾಗೂ ಸಂತೋಷ್ ಸ್ನೇಹಿತರು ನಿಟ್ಟೆ ಸಮೀಪದ ಅರ್ಬಿ ಜಲಪಾತಕ್ಕೆ ಪ್ರವಾಸ ತೆರಳಿದ್ದರು.

ಜಲಪಾತದ ಸಮೀಪ ಸೆಲ್ಫಿ ಕ್ಲಿಕ್ಕಿಸಲು ಮುಂದಾದಾಗ ಸುದೇಶ್‌ ಹಾಗೂ ಭರತ್‌ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅದರಲ್ಲಿ ಭರತ್ ಈಜಿ ಮೇಲೆರಿ ಬಂದರೆ ಸುರೇಶ್ ನಿಧನರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್, ಗ್ರಾಮಾಂತರ ಠಾಣೆಯ ಉಪನಿರೀಕ್ಷಕ, ಅಗ್ನಿ ಶಾಮಕ ದಳ ಭೇಟಿ ನೀಡಿದ್ದು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕಾರ್ಕಳ ತಾಲೂಕು ಕೇಂದ್ರದಿಂಡ ಒಂಬತ್ತು ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ವಾರಾಂತ್ಯ, ರಜಾದಿನಗಳಲ್ಲಿ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಯಾವ ಬಗೆಯ ಮೂಲಭೂತ ಸೌಕರ್ಯ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಲಲಾಗಿಲ್ಲ ಎನ್ನುವುದು ಆತಂಕದ ವಿಚಾರವಾಗಿದೆ.

SCROLL FOR NEXT