ರಾಜ್ಯ

ಮಂತ್ರಾಲಯ: ರಾಘವೇಂದ್ರಸ್ವಾಮಿಗಳ 348 ನೇ ಆರಾಧನಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ

Shilpa D

ರಾಯಚೂರು: ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವದ ಸಪ್ತ ರಾತ್ರೋತ್ಸವ ಕಾರ್ಯಕ್ರಮಗಳಿಗೆ ಮಂತ್ರಾಲಯದಲ್ಲಿಂದು ಚಾಲನೆ ದೊರೆಯಿತು.

ಇಂದಿನಿಂದ ಒಂದು ವಾರ ನಡೆಯುವ ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬೆಳಗ್ಗೆ ೪ ಗಂಟೆಗೆ ಮೂಲ ಬೃಂದಾವನಕ್ಕೆ ವಿಶೇಷಪೂಜೆ, ಮಹಾ ಮಂಗಳಾರತಿ, ರಾಮದೇವರ ಪೂಜೆ, ಅಷ್ಟೋದಕ ಮಹಾ ಮಂಗಳಾರತಿ, ಮಹಾಪೂಜೆ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆದಿವೆ.

ಸಂಜೆ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಮಠದ ಮುಂಭಾಗದಲ್ಲಿ ಭಗವತ್ ಧ್ವಜಾರೋಹಣದೊಂದಿಗೆ ವಿಧ್ಯುಕ್ತವಾಗಿ ಚಾಲನೆ ದೊರೆತಿದ್ದುಗೋ ಪೂಜೆ, ಗಜಪೂಜೆ, ಅಶ್ವ ಪೂಜೆ ನೆರವೇರಿತು.

ಕಳೆದ ಮೂರು ದಿನಗಳ ಹಿಂದೆ ನದಿಯಲ್ಲಿ ನೀರಿಲ್ಲದ ಕಾರಣ ಆತಂಕ ಉಂಟಾಗಿತ್ತು. ಮಲೆನಾಡಿನಲ್ಲಿ ಹೆಚ್ಚಾದ ಮಳೆಯಿಂದಾಗಿ ತುಂಗೆ ತುಂಬಿಹರಿದಿರುವುದು ಜನರಲ್ಲಿ ನಿರಾಳ ಭಾವ ತರಿಸಿದೆ.

ಮಂತ್ರಾಲಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು ಅಪಾರ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯುತ್ತಿದ್ದಾರೆ. ರಾಘವೇಂದ್ರರ ಆರಾಧನಾ ಮಹೋತ್ಸವ ಇದೇ 20 ರವರೆಗೆ ನಡೆಯಲಿದೆ.

SCROLL FOR NEXT