ರಾಜ್ಯ

 ಕಲ್ಬುರ್ಗಿ  ಹತ್ಯೆ ಪ್ರಕರಣ: ಆರು ಆರೋಪಿಗಳ ವಿರುದ್ಧ ಹೈಕೋರ್ಟಿನಲ್ಲಿ ಚಾರ್ಜ್ ಶೀಟ್ ದಾಖಲಿಸಿದ ಎಸ್ ಐಟಿ

Nagaraja AB

ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಎಂ. ಎಂ. ಕಲ್ಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ನ್ಯಾಯಾಲಯದಲ್ಲಿ ಇಂದು ಚಾರ್ಜ್ಶೀಟ್ ದಾಖಲಿಸಿದೆ.

ಆರೋಪಿಗಳಾದ ಮಹಾರಾಷ್ಟ್ರದ  ಅಮೋಲ್ ಎ. ಕಾಳೆ. ವಾಸುದೇವ್  ಭಗವಾನ್ ಸೂರ್ಯವಂಶಿ, ಹುಬ್ಬಳ್ಳಿಯ  ಗಣೇಶ್ ಮಿಸ್ಕಿನ್ , ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್ ,ಔರಂಗಾಬಾದಿನ  ಶರದ್ ಬಾಹು ಸಾಹೇಬ್ ಕಳಾಸ್ಕರ್,  ಹಾಗೂ ಹುಬ್ಬಳ್ಳಿಯ ಅಮಿತ್ ಬದ್ದಿ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣಾ  ಪಟ್ಟಿಯನ್ನು ಸಲ್ಲಿಸಲಾಗಿದೆ.

 ಸಿಐಡಿ ತನಿಖಾಧಿಕಾರಿಗಳು ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಆಧರಿಸಿ  ತನಿಖೆಯನ್ನು ಮುಂದುವರೆಸಿದ ಎಸ್ ಐಟಿ  ತಂಡವು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ತಜ್ಞರ ಅಭಿಪ್ರಾಯಗಳು,  ಮತ್ತಿತರೆ ಸಾಕ್ಷ್ಯಾಧಾರಾಗಳನ್ನು ಸಂಗ್ರಹಿಸಿ  ಡಾ.ಎಂ.ಎಂ. ಕಲ್ಬುರ್ಗಿ ಅವರನ್ನು ಸಂಚು ರೂಪಿಸಿ  ಹತ್ಯೆ ಮಾಡಿದ್ದ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.

ಆಗಸ್ಟ್ 30, 2015ರಂದು  ಧಾರಾವಾಡದ ಕಲ್ಯಾಣದಲ್ಲಿರುವ ಕಲ್ಬುರ್ಗಿ ಅವರ ನಿವಾಸದ ಬಳಿ ಬಂದ  ಬೈಕಿನಲ್ಲಿ ಬಂದ ಅಪರಿಚಿತರು  ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಬಗ್ಗೆ  ಡಾ. ಕಲ್ಬುರ್ಗಿ ಅವರ ಮಗಳು ರೂಪದರ್ಶಿ ಕಿಣಗಿ ನೀಡಿದ ದೂರನ್ನು  ಆಧರಿಸಿ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 34 ಹಾಗೂ ಸೆಕ್ಷನ್ 25 ಶಸ್ತ್ರಾಸ್ತ್ರ  ಕಾಯ್ದೆ ರೀತ್ಯ  ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.

SCROLL FOR NEXT