ರಾಜ್ಯ

ಸರ್ಕಾರ ಇಂದಿರಾ ಕ್ಯಾಂಟೀನುಗಳನ್ನು ಮುಂದುವರೆಸುವಂತೆ ಸಿದ್ದರಾಮಯ್ಯ ಒತ್ತಾಯ

Nagaraja AB

ಬೆಂಗಳೂರು: ಇಂದಿರಾ ಕ್ಯಾಂಟೀನುಗಳಿಗೆ ಸರ್ಕಾರ ಅಗತ್ಯ ಹಣಕಾಸು ಒದಗಿಸುತ್ತಿಲ್ಲ. ಆದ್ದರಿಂದಾಗಿ  ಬೆಂಗಳೂರು ಮಹಾನಗರ ಪಾಲಿಕೆ ಆ ಕ್ಯಾಂಟೀನುಗಳನ್ನು ನಡೆಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನುಗಳಿಗೆ ಸರ್ಕಾರ ಹಣಕಾಸು ಒದಗಿಸದೆ ಇರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸದ್ಯ ಬಿಬಿಎಂಪಿ ಈ  ಕ್ಯಾಂಟೀನುಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನುಗಳಿಗೆ ಹಣಕಾಸು ನೀಡದ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನುಗಳನ್ನು ಸರ್ಕಾರ ಮುಂದುವರೆಸಬೇಕು ಹಾಗೂ ಬೆಂಗಳೂರಿನ ಕ್ಯಾಂಟೀನುಗಳಿಗೆ ಹಣಕಾಸು ಒದಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ 190ಕ್ಕೂ ಹೆಚ್ಚು ಕ್ಯಾಂಟೀನುಗಳಿವೆ. ಅವುಗಳಿಗೆ ವರ್ಷಕ್ಕೆ 200 ಕೋಟಿ ರೂಪಾಯಿ ವೆಚ್ಚವಾಗುತ್ತದೆ.  ಅವುಗಳನ್ನು ಸರ್ಕಾರ ಬಿಬಿಎಂಪಿಗೆ ಬಿಡಬಾರದು, ಸರ್ಕಾರ ಅಗತ್ಯ ಹಣಕಾಸು ಒದಗಿಸಬೇಕು ಎಂದರು.


ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಇಂದಿರಾ ಕ್ಯಾಂಟೀನುಗಳನ್ನು ಸ್ಥಾಪಿಸಿತ್ತು. 

SCROLL FOR NEXT