ರಾಜ್ಯ

ಕೆಆರ್ ಎಸ್ ಡ್ಯಾಂ ಬಳಿಯ ನಿಗೂಢ ಶಬ್ಧದ ಕುರಿತು ಅಧಿಕಾರಿಗಳೇ ಸ್ವಷ್ಟನೆ ನೀಡಬೇಕು: ಯದುವೀರ್ ಆಗ್ರಹ

Srinivasamurthy VN

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಸುತ್ತಮುತ್ತ ಕೇಳಿಬಂದ ಭಾರೀ ಶಬ್ಧದ ಬಗ್ಗೆ ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ಭಾನುವಾರ ಮದ್ದೂರಿನ ಶ್ರೀ ನರಸಿಂಹಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಅವರು, ಕೆಆರ್‌ಎಸ್‌ ಮೈಸೂರು - ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಇಂತಹ ಸ್ಥಳದಲ್ಲಿ ಕೇಳಿ ಬಂದಿರುವ ಭಾರಿ ಶಬ್ದ ಜನರ ಆತಂಕಕ್ಕೆ ಕಾರಣವಾಗಿದ್ದು ಈ ಸಂಬಂಧ ಅಧಿಕಾರಿಗಳು ಉತ್ತರ ನೀಡಬೇಕು. ಗಣಿಗಾರಿಕೆ ಸ್ಫೋಟದಿಂದ ಈ ಶಬ್ಧ ಕೇಳಿಬಂದಿದೆಯೋ ಅಥವಾ ಇತರೆ ಕಾರಣ ಇರಬಹುದು ಎಂದು ಸಂಬಂಧಿಸಿದ ಅಧಿಕಾರಿಗಳು ಉತ್ತರ ನೀಡಬೇಕು ಎಂದರು.

ಇನ್ನು ಬೇಬಿ ಬೆಟ್ಟ ಮತ್ತು ಆಸುಪಾಸಿನ ಸ್ಥಳಗಳಲ್ಲಿ ಮೈಸೂರು ಮಹಾಸಂಸ್ಥಾನಕ್ಕೆ ಸೇರಿದ ಭೂಮಿಗಳ ಬಗ್ಗೆ ಜಿಲ್ಲಾಕಾರಿಗಳು ಸೂಕ್ತ ದಾಖಲೆ ನೀಡಿಲ್ಲ. ಈ ದಾಖಲೆ ಪಡೆಯುವ ಹಕ್ಕು ತಮ್ಮ ತಾಯಿ ಪ್ರಮೋದಾ ದೇವಿ ಅವರಿಗಿದೆ. ಆನಂತರ ಅದು ನಮಗೆ ಸೇರುತ್ತದೆ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯದುವೀರ್ ಹೇಳಿದರು.

ಇದೇ ವೇಳೆ ದಸರಾ ಕುರಿತು ಮಾತನಾಡಿದ ಯದುವೀರ್ ಅವರು, 'ಕಳೆದ 400 ವರ್ಷಗಳಿಂದಲೂ ಮೈಸೂರು ರಾಜಮನೆತನ ಸಂಸ್ಥಾನದ ವತಿಯಿಂದ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದೆ. ರಾಜ್ಯ ಸರ್ಕಾರ ಸಹ ತನ್ನದೇ ಆದ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತದೆ. ನೆರೆ ಹಾವಳಿ ಇರುವುದರಿಂದ ನಾವು ಸಂಪ್ರದಾಯಬದ್ಧವಾಗಿ ನಡೆಸಿಕೊಂಡುವ ಬಂದಿರುವ ಧಾರ್ಮಿಕ ವಿಧಿ ವಿಧಾನಗಳನ್ನು ನಾವು ನೆರವೇರಿಸುತ್ತೇವೆ. ದಸರಾ ಹಬ್ಬದ ಆಚರಣೆಯನ್ನು ಅದ್ದೂರಿ ಅಥವಾ ಸರಳವಾಗಿ ಆಚರಿಸಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟವಿಚಾರ ಎಂದು ಹೇಳಿದರು.

SCROLL FOR NEXT