ರಾಜ್ಯ

ಬಾಗಲಕೋಟೆ:ಪ್ರವಾಹ ನಿಂತರೂ ಜಿಲ್ಲೆಯ ಸುಮಾರು 1, 200 ಶಾಲೆಗಳು ಬಂದ್  

Nagaraja AB

ಬಾಗಲಕೋಟೆ: ಪ್ರವಾಹದ ನಂತರ ಜಿಲ್ಲೆಯ ಸುಮಾರು 1 ಸಾವಿರದ 200 ಸರ್ಕಾರಿ ಶಾಲೆಗಳು ದುಸ್ಥಿತಿಗೊಳ್ಳಗಾಗಿದ್ದು, ಸಂತ್ರಸ್ತರ ಪರಿಹಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಹಲವು ದಿನಗಳಿಂದ ನಿಂತುಹೋಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು  ಸರಿದೂಗಿಸಲು ಈ ಬಾರಿಯ ದಸರಾ ರಜೆ ರದ್ದುಪಡಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. 

ಜಿಲ್ಲಾಡಳಿತ ಆಗಸ್ಟ್ 15ರವರೆಗೂ ಶಾಲೆಗಳಿಗೆ ರಜೆ ಘೋಷಿಸಿತ್ತು. ಆದರೆ, ಅನೇಕ ಹಳ್ಳಿಗಳು ಹಾಗೂ ಶಾಲೆಗಳು ಇನ್ನೂ ಜಲಾವೃತಗೊಂಡಿರುವುದರಿಂದ ಅನಿರ್ಧಿಷ್ಟಾವಧಿಯವರೆಗೂ ರಜೆಯನ್ನು ಘೋಷಿಸಲಾಗಿದೆ. 

ಜಿಲ್ಲೆಯ ಸುಮಾರು 1 ಸಾವಿರದ 298ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳು ಇಲ್ಲದಂತಾಗಿದೆ.  ಇದೀಗ  ಸಂತ್ರಸ್ತರ ಕೇಂದ್ರಗಳಾಗಿ ರೂಪುಗೊಂಡಿದ್ದು,ಶೈಕ್ಷಣಿಕ  ಚಟುವಟಿಕೆ ಪುನರ್ ಆರಂಭಿಸಲು ಕಷ್ಟಕರವಾಗಿದೆ. ಇದರಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. 

ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ. ಹೆಚ್ . ಗೊನಾಲ್, ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ನಿರ್ಮಾಣ ಮಾಡುವವರೆಗೂ ಪ್ರವಾಹ ಪೀಡಿತ ಪ್ರದೇಶಗಳ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಭೀಕರ ಪ್ರವಾಹದಿಂದಾಗಿ ಹಲವು ಶಾಲೆಗಳ ಮೂಲಸೌಕರ್ಯಗಳು ಸಂಪೂರ್ಣವಾಗಿ ಹಾಳಾಗಿದ್ದು, ಶಾಲೆಗಳನ್ನು ಯಾವಾಗ ಪುನರ್ ಆರಂಭ ಮಾಡಲಾಗುತ್ತದೆ ಎಂಬುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಒಂದು ವಾರ ಅಥವಾ ತಿಂಗಳೇ ಬೇಕಾಗುತ್ತದೆ . ಶಾಲೆಗಳು ಪುನರ್ ಆರಂಭಗೊಂಡ ನಂತರ ವಾರಾಂತ್ಯ , ಇತರ ಸರ್ಕಾರಿ ರಜೆ ದಿನಗಳ ಅವಧಿಯಲ್ಲೂ ತರಗತಿಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

SCROLL FOR NEXT