ರಾಜ್ಯ

ಸಿದ್ದರಾಮಯ್ಯ 'ಅತಿಥಿ ಶಾಸಕ': ನೆರೆ ಇಳಿದ ಮೇಲೆ ಆಗಮಿಸಿದ ಮಾಜಿ ಸಿಎಂ ವಿರುದ್ಧ ಬಾದಾಮಿ ಜನರ ಆಕ್ರೋಶ

Raghavendra Adiga

ಬಾಗಲಕೋಟೆ: ಪ್ರವಾಹದಿಂದ ನಲುಗಿ ಹೋಗಿದ್ದ ಉತ್ತರ ಕರ್ನಾಟಕದ ತಮ್ಮ ಕ್ಷೇತ್ರ ಬಾದಾಮಿಗೆ ಪ್ರವಾಹ ಪೀಡಿತ ದಿನಗಳಲ್ಲಿ ಒಮ್ಮೆಯೂ ಭೇಟಿ ನೀಡದ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿ ತಹಬಂದಿಗೆ ಬಂದು  ಹತ್ತು ದಿನಗಳು ಕಳೆದ ನಂತರ ಇದೀಗ ಭೇಟಿ ಕೊಟ್ಟಿದ್ದಾರೆ. ಅವರು ಬಾದಾಮಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಾಜ್ಯದ ಪ್ರವಾಹ ಪರಿಸ್ಥಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಆದರೆ ಆತಂಕದ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ಆಗಮಿಸದೆ ಹೋದ ಸಿದ್ದರಾಮಯ್ಯನವರ ಬಗೆಗೆ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಅವರನ್ನು ‘ಅತಿಥಿ ಶಾಸಕರು’ ಎಂದು ಜರಿದಿದ್ದಾರೆ.

ಸಾರ್ವಜನಿಕರ ಟೀಕೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ “ನನಗೆ ಆಗಸ್ಟ್ 4 ರಂದು ಕಣ್ಣಿನ ಶಸ್ತ್ರಚಿಕಿತ್ಸೆ ಆಗಿತ್ತು. ಆಗಸ್ಟ್ 6 ರಂದು ಪ್ರವಾಹ ಉಲ್ಬಣಿಸಿದೆ. ನಾನು ಭೇಟಿ ನೀಡಲು ಸಿದ್ಧನಿದ್ದೆ, ಆದರೆ  ವೈದ್ಯರು ನಾನು ವಿಶ್ರಾಂತಿ ಪಡೆಯಬೇಕೆಂದು ಒತ್ತಾಯಿಸಿದರು” ಎಂದು ಹೇಳಿದ್ದಾರೆ.ಕೇಂದ್ರವು ಏಕಕಾಲದಲ್ಲಿ 5,000 ಕೋಟಿ ರೂ.ಗಳನ್ನು ಪರಿಹಾರ ನಿಧಿಯಾಗಿ ಬಿಡುಗಡೆಗೊಳಿಸಬೇಕು.ಇಂತಹಾ ಪರಿಸ್ಥಿತಿ ಇನ್ನು ಮರುಕಳಿಸದು ಎಂದು ಖಾತ್ರಿ ಪಡಿಸಿಕೊಳ್ಳಲು ನಾನು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೊಂದೆಡೆ ಶಿವಮೊಗ್ಗದಲ್ಲಿ ಮಾತನಾಡಿದ ತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪನವರಿಗೆ ಒತ್ತಾಯಿಸಿದ್ದಾರೆ.. "ಯಡಿಯೂರಪ್ಪ ಅವರು ಪ್ರವಾಹವನ್ನು ನಿಭಾಯಿಸಲು ವಿಫಲವಾದರೆ ರಾಜೀನಾಮೆ ನೀಡಬೇಕು" ಎಂದು ಅವರು ಹೇಳಿದರು. ರಾವ್ ಸೋಮವಾರ ಶಿವಮೊಗ್ಗದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. "ವಿಪತ್ತು ಸಂಭವಿಸಿದ 15 ದಿನಗಳ ನಂತರವೂ ರಾಜ್ಯದತ್ತ ಗಮನ ಹರಿಸಲು ಕೇಂದ್ರ ವಿಫಲವಾಗಿದೆ" ಎಂದು ಅವರು ಹೇಳಿದರು.

SCROLL FOR NEXT