ರಾಜ್ಯ

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ: ಆಗಸ್ಟ್ 22 ರಂದು 'ಗಜಪಯಣ'

Shilpa D

ಮೈಸೂರು: ವಿಶ್ವವಿಶ್ಯಾತ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಗಜಪಡೆಗಳ ಪಟ್ಟಿ ಸಿದ್ಧವಾಗಿದೆ ಆಗಸ್ಟ್ 22 ರಂದು ಮೊದಲ ಗಜಪಡೆ ಮೈಸೂರಿಗೆ ಪ್ರಯಾಣ ಬೆಳೆಸಲಿದೆ.

ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಮೈಸೂರು ಅರಮನೆಗೆ ಗಜಪಡೆಗಳ ಮೊದಲ ತಂಡ ಆಗಮಸಲಿದೆ. 

ಆಗಸ್ಟ್ 22ರ ಬೆ.10.30ಕ್ಕೆ ಗಜಪಯಣಕ್ಕೆ ಚಾಲನೆ ದೊರೆಯಲಿದೆ. ದಸರಾ ಗಜಪಡೆಯ ಮೊದಲ ತಂಡದಲ್ಲಿ ಆರು ಆನೆಗಳು ಇರಲಿವೆ. ಚಿನ್ನದ ಅಂಬಾರಿ ಹೊರಲಿರುವ ಸಾರಥಿ ಅರ್ಜುನ ನೇತೃತ್ವದ ಆರು ಆನೆಗಳಿಗೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಾಗುವುದು. 

ಗಜ ಪಡೆಗಳ ಪಯಣಕ್ಕೆ ಈಗಾಗಲೇ ಮೈಸೂರು ದಸರಾ ಸಮಿತಿ ಹಾಗೂ ಅರಣ್ಯ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. 

ಈ ಬಾರಿ ದಸರಾದಲ್ಲಿ 14 ಆನೆಗಳು ಭಾಗಿಯಾಗಲಿವೆ. ಎರಡು ತಂಡಗಳಾಗಿ ಮೈಸೂರಿಗೆ ಬರಲಿದೆ ಗಜಪಡೆಗಳು. 

ಮೊದಲ ತಂಡದಲ್ಲಿ 6 ಆನೆಗಳು. ಅಂದರೆ ಅರ್ಜುನ, ಅಭಿಮನ್ಯು ಮತ್ತು ವರಲಕ್ಷ್ಮಿ, ಧನಂಜಯ, ವಿಜಯ ಮತ್ತು ಈಶ್ವರ ಆನೆಗಳು  ಎರಡನೆ ತಂಡದಲ್ಲಿ 8 ಆನೆಗಳು ಇರಲಿವೆ. 

SCROLL FOR NEXT