ರಾಜ್ಯ

ಶಿವಮೊಗ್ಗದ ಹಳ್ಳಿಯ ಅಡಿಕೆ ಚಹಾಕ್ಕೆ ವಿಶ್ವ ಮಾನ್ಯತೆ; 2019ರ 'ಭಾರತದ ಪ್ರತಿಷ್ಠಿತ ಬ್ರಾಂಡ್ 'ಗೆ ನಾಮ ನಿರ್ದೇಶನ 

Sumana Upadhyaya

ಹುಬ್ಬಳ್ಳಿ; ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಚಹಾ ಉದ್ಯಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ಅಡಿಕೆ ಚಹಾ 2019ನೇ ಸಾಲಿನ ಭಾರತದ ಪ್ರತಿಷ್ಠಿತ ವ್ಯಾಪಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಬ್ರಾಂಡ್ ಅಡ್ವರ್ಟ್ಲೈಸಿಂಗ್ ರಿಸರ್ಚ್ ಅಂಡ್ ಕನ್ಸಲ್ಟಿಂಗ್ ಪ್ರೈ, ಲಿಮಿಟೆಡ್ ಏಷ್ಯಾ ನಾಮ ನಿರ್ದೇಶನ ಮಾಡಿದ್ದು ಕರ್ನಾಟಕದಿಂದ ಈ ವರ್ಷ ಆಯ್ಕೆಯಾದ ಒಂದೇ ಒಂದು ಉತ್ಪನ್ನ ಇದಾಗಿದೆ.


ಅಡಿಕೆಯಿಂದ ತಯಾರಿಸಲ್ಪಟ್ಟ ಚಹಾ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಗುರುತನ್ನು ಸ್ಥಾಪಿಸಿದ್ದು ದೇಶೀಯ ಆರೋಗ್ಯಕರ ಉತ್ಪನ್ನಗಳ ಸಾಲಿನಲ್ಲಿ ಹೆಜ್ಜೆಯಿಡುತ್ತಿದೆ. ಸಕ್ಕರೆ ಕಾಯಿಲೆಗೆ ಅಡಿಕೆ ಚಹಾ ಉತ್ತಮ ಎಂದು ಹೇಳಲಾಗುತ್ತಿದ್ದು ಪರೋಕ್ಷವಾಗಿ ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಒಳ್ಳೆಯದಾಗಿದೆ.


ಗ್ರಾಮೀಣ ಪ್ರದೇಶವೊಂದರ ಸ್ಟಾರ್ಟ್ ಅಪ್ ಉದ್ಯಮ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು ಸಾಧನೆಯ ವಿಷಯ. ಅಡಿಕೆ ಚಹಾ ಡಯಾಬಿಟಿಸ್ ಕಾಯಿಲೆಯಿರುವವರಿಗೆ ಉತ್ತಮ ಎಂದು ವೈದ್ಯಕೀಯ ಪರೀಕ್ಷೆಯಿಂದಲೇ ಸಾಬೀತಾಗಿದೆ. ಗ್ರಾಹಕರಿಂದ ಪ್ರತಿಕ್ರಿಯೆ ಪಡೆದು ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಉತ್ಪನ್ನಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದೇವೆ ಎನ್ನುತ್ತಾರೆ ಅಡಿಕೆ ಚಹಾದ ಸ್ಥಾಪಕ ಹಾಗೂ ಸಿಇಒ ನಿವೇದನ್ ನೆಂಪೆ.


ನಾವು ಚಹಾದ ಗುಣಮಟ್ಟ ಕಾಪಾಡುವುದು ಇಲ್ಲಿ ಮುಖ್ಯವಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದು ಜನಪ್ರಿಯವಾಗಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.


ಕಂಪೆನಿ ಉಡುಪಿ ಜಿಲ್ಲೆಯಲ್ಲಿ ಉತ್ಪಾದನಾ ಕೇಂದ್ರವನ್ನು ಹೊಂದಿದೆ. ಶಿವಮೊಗ್ಗದ ಮಂಡಗದ್ದೆಯಲ್ಲಿ ಘಟಕವಿದೆ. ಈಗಾಗಲೇ ಹಲವು ಸ್ಥಳೀಯರಿಗೆ ಅದರಲ್ಲೂ ವಯೋವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಇದರಿಂದ ಉದ್ಯೋಗ ಸಿಕ್ಕಿದೆ. ರೈತರಿಗೂ ತಮ್ಮ ಅಡಿಕೆ ಮಾರಾಟಕ್ಕೆ ಸಹಾಯವಾಗಿದೆ. 


ಕಂಪೆನಿ ಜರ್ಮನಿ ಕಂಪೆನಿ ಜೊತೆ ಸೇರಿ ಕಬ್ಬು ಮತ್ತು ಅಕ್ಕಿಯಿಂದ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಲು ಯೋಜನೆ ರೂಪಿಸುತ್ತಿದೆ.

SCROLL FOR NEXT