ರಾಜ್ಯ

ಪಿಎಂ ಆದೇಶದ ಮೇರೆಗೆ ಪ್ರಸಿದ್ಧ ಪ್ರವಾಸಿ ಸ್ಥಳ ಪಟ್ಟಿ ಮಾಡಿದ ರಾಜ್ಯ ಪ್ರವಾಸೋದ್ಯಮ ಇಲಾಖೆ

Shilpa D

ಬೆಂಗಳೂರು: ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗುರುತಿಸಿ ಅಗತ್ಯ ಸೌಕರ್ಯ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದ್ದರು.

ಅದರಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ 20 ಪ್ರಮುಖ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿದೆ.  ಇತ್ತೀಚೆಗೆ  ಕೇಂದ್ರ ಬಜೆಟ್ ನಲ್ಲಿ  ದೇಶದ 17 ಪ್ರವಾಸಿ ಸ್ಥಳಗಳನ್ನು ಪಟ್ಟಿ ಮಾಡಿ ಪ್ರಕಟಿಸಲಾಗಿತ್ತು. ಅದರಂತೆ ಆಯಾ ರಾಜ್ಯಗಳ ಪಟ್ಟಿ ತಯಾರಿಸಲು ಸೂಚಿಸಲಾಗಿತ್ತು.

ಎರಡನೇ ಮತ್ತು ಮೂರನೇ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಮೊಹಮದ್ ಫಾರೂಖ್ ಹೇಳಿದ್ದಾರೆ.

ಕರ್ನಾಟಕದ ಕಾರವಾರ, ಗೋಲ್ಕೊಂಡ ಕೋಟೆ ಸೇರಿದಂತೆ ಹಲವು ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪ್ರವಾಸೋದ್ಯಮ ಸ್ಥಳಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲು 2022 ರ ಗಡುವು ನೀಡಲಾಗಿದೆ ಎಂದು ಫಾರೂಖ್  ತಿಳಿಸಿದ್ದಾರೆ,

ಕರ್ನಾಟಕದ ವಿವಿಧ ಪ್ರವಾಸಿ ಸ್ಥಳಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು, ಕೆಲವು ಸ್ಥಳಗಳು ದಟ್ಟ ಕಾಡಿನ ಮಧ್ಯದಲ್ಲಿವೆ, ಅಥವಾ ಪ್ರಾಚ್ಯ ಸಂಶೋಧನಾ ಇಲಾಖೆ ವ್ಯಾಪ್ತಿಗೊಳ ಪಟ್ಟಿರುವ ಕಾರಣದಿಂದ ಅವುಗಳ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.

ಟ್ರಾವೆಲ್ ಏಜೆಂಟರು ಪ್ರವಾಸಿಗರನ್ನು ಸೆಳೆಯುವ ಯೋಜನೆಗಳು ಮತ್ತು ಕಾರ್ಯತಂತ್ರಗಳೊಂದಿಗೆ ಬರುತ್ತಿದ್ದಾರೆ. ರಾಜ್ಯದ ಆರು ಜಿಲ್ಲೆಗಳಾದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯನಗರ್ ಮತ್ತು ಹಂಪಿ ಮತ್ತು ಮೈಸೂರಿನಲ್ಲಿ ವಿಮಾನ ನಿಲ್ದಾಣಗಳಿರುವ ಕಾರಣ ಪ್ರತಿ ವರ್ಷ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿದೆ  ಎಂದು ತಿಳಿಸಿದ್ದಾರೆ.

SCROLL FOR NEXT