ರಾಜ್ಯ

ಮೈಸೂರು ಉದ್ಯಮಿಯಿಂದ 5.75 ಕೋಟಿ ರೂ ವಶಪಡಿಸಿಕೊಂಡ ಐಟಿ ಇಲಾಖೆ 

Sumana Upadhyaya

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೈಸೂರಿನ ಉದ್ಯಮಿಯಿಂದ 5.75 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. 


ಮೈಸೂರಿನಲ್ಲಿ ಆಸ್ತಿಯನ್ನು ಈ ಉದ್ಯಮಿ ಅಧಿಕ ಮೊತ್ತಕ್ಕೆ ಮಾರಾಟ ಮಾಡಿ ಅಪಾರ ನಗದನ್ನು ಪಡೆದಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದ ಕೂಡಲೇ ಐಟಿ ಅಧಿಕಾರಿಗಳು ಖರೀದಿದಾರರು ಮತ್ತು ಮಾರಾಟಗಾರರ ಮೇಲೆ ಕಣ್ಗಾವಲು ಇರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.


ಐಟಿ ಅಧಿಕಾರಿಗಳು ಮನ್ನರ್ ಸಿಲ್ಕ್ ಶೋರೂಂನ ಪಾಲುದಾರ ಸಂದೀಪ್ ಅವರ ಮೇಲೆ ದಾಳಿ ನಡೆಸಿದರು. ಮಾರಾಟಗಾರ ಧರ್ಮರಾಜ ಚೆರ್ರಿ ಅಂಡ್ ಸನ್ಸ್ ಅವರ ನಿವಾಸದಲ್ಲಿ ಹಣ ನೀಡಲು ಬಂದಾಗ ಐಟಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ 5.75 ಕೋಟಿ ರೂಪಾಯಿ ನಗದು ಸಿಕ್ಕಿದೆ.


ಆಸ್ತಿಯನ್ನು 13.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅದರಲ್ಲಿ 8 ಕೋಟಿ ರೂಪಾಯಿ ಬ್ಯಾಂಕ್ ಮೂಲಕ ನೀಡಲಾಗಿತ್ತು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡುವ ಮಾತುಕತೆಯಾಗಿತ್ತು. ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ನಗದು ಮೂಲಕ ನೀಡಲು ಮಾತುಕತೆಯಾಗಿತ್ತು. 

SCROLL FOR NEXT