ಅಲ್ಟಿಮೇಟ್ ಜಿಮ್ ನ ತರಬೇತುದಾರ ಶಿವಕುಮಾರ್ 
ರಾಜ್ಯ

ಫಿಟ್ನೆಸ್​ ಆಸೆಯಿಂದ ಪುರುಷತ್ವಕ್ಕೇ ಕುತ್ತು; ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ: ಜಿಮ್ ತರಬೇತುದಾರನ ಬಂಧನ

ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅಲ್ಟಿಮೇಟ್ ಜಿಮ್ ನ ತರಬೇತುದಾರ ಶಿವಕುಮಾರ್ ಬಂಧಿತ ಆರೋಪಿ

ಬೆಂಗಳೂರು: ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ಅಲ್ಟಿಮೇಟ್ ಜಿಮ್ ನ ತರಬೇತುದಾರ ಶಿವಕುಮಾರ್ ಎಂಬಾತನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದು, ಶಿವಕುಮಾರ್ ಸ್ಟಿರಾಯ್ಡ್​ನಂಥ ಹಾನಿಕಾರಕ ಔಷಧಿಯನ್ನ ಗ್ರಾಹಕರಿಗೆ, ದೇಹ ದಪ್ಪ ಮಾಡಲು ಮತ್ತು ತೆಳುವಾಗಿಸಲು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಮಾಹಿತಿ ಕಲೆಹಾಕಿದ ಪೊಲೀಸರು ಅಲ್ಟಿಮೇಟ್ ಜಿಮ್ ಮೇಲೆ ದಾಳಿ ಮಾಡಿದ್ದಾರೆ. 

ದಾಳಿ ವೇಳೆ ನಿಷೇಧಕ್ಕೊಳಪಟ್ಟಿರುವ ಸ್ಟಿರಾಯ್ಡ್ ​ಗಳು, ಪ್ರೋಟೀನ್ ಬಾಟಲ್ ​ಗಳು, ಮತ್ತು ಕೆಲವು ಟ್ಯಾಬ್ಲೆಟ್ ಮತ್ತು ಇಂಜೆಕ್ಷನ್​ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸ್ಟಿರಾಯ್ಡ್ ಬಳಕೆಯಿಂದ ದೇಹದಲ್ಲಿ ಹಲವು ರೀತಿಯ ಸೈಡ್​ ಎಫೆಕ್ಸ್ಟ್​ಗಳಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಸದ್ಯ ಪೊಲೀಸರು ಜಿಮ್ ಟ್ರೈನರ್​ನನ್ನು ಬಂಧಿಸಿ, ಆತನ ಮೇಲೆ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ನಿಷೇಧಿತ ಸ್ಟಿರಾಯ್ಡ್​ಗಳ ದುರ್ಬಳಕೆ ಕುರಿತಂತೆ ಔಷಧ ನಿಯಂತ್ರಣ ಇಲಾಖೆಗೂ ಪೊಲೀಸರು ಪತ್ರ ಬರೆಯಲಿದ್ದಾರೆ ಎನ್ನಲಾಗಿದೆ.

ಪುರುಷತ್ವಕ್ಕೇ ಬರುತ್ತೆ ಕುತ್ತು!
ಸ್ಟಿರಾಯ್ಡ್​ ಬಳಕೆಯಿಂದ ಗಂಡಸರ ಪುರುಷತ್ವಕ್ಕೇ ತೊಂದರೆ ಉಂಟಾಗುತ್ತದೆ. ಈ ಸ್ಟಿರಾಯ್ಡ್​ ಗಳು ರಕ್ತಕ್ಕೆ ಸೇರುವುದರಿಂದ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಫಿಟ್​ನೆಸ್​ ಬೇಕೆಂದು ಸ್ಟಿರಾಯ್ಡ್​ ಸೇವಿಸಿದರೆ ಪುರುಷತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT