ರಾಜ್ಯ

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸ್ವಕ್ಷೇತ್ರದ ಕಾರ್ಡ್ ಪ್ಲೇ ಮಾಡಿದ ಸಿಎಂ ಯಡಿಯೂರಪ್ಪ

Shilpa D

ಕೆಆರ್ ಎಸ್: ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯನ್ನು ತಮ್ಮ ತವರು ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹೊಸ ದಾಳ ಉರುಳಿಸಿದ್ದಾರೆ.

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 'ಜೀವನಾಡಿ' ಕನ್ನಂಬಾಡಿಕಟ್ಟೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ವಿಶೇಷ ಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು. 

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವರಾದ ಯಡಿಯೂರಪ್ಪ ಬೃಂದಾವನ ಗಾರ್ಡನ್ ನಲ್ಲಿರುವ ತಾಯಿ ಕಾವೇರಿಗೆ ಪೂಜೆ ಸಲ್ಲಿಸಿ  ಬಾಗಿನ ಅರ್ಪಿಸಿದರು.

ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಪ್ರಮಾಣ ಏರಿಕೆಯಾಗಿದೆ,  ಇನ್ನೂ ನಾಲ್ಕು ಐದು ದಿನಗಳಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಲಿವೆ ಎಂದು ಹೇಳಿದ್ದಾರೆ.
ಒಳಹರಿವು ಮತ್ತು ಜಲಾಶಯದ ಮಟ್ಟವನ್ನು ತಿಳಿಯಲು ನಾನು ನಿಯಮಿತವಾಗಿ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆ. ಕೆಆರ್ಎಸ್, ಕಬಿನಿ, ಹೇಮವತಿ ಮತ್ತು ಹಾರಂಗಿ ಸೇರಿದಂತೆ ಜಲಾಶಯಗಳನ್ನು ತುಂಬಿಸಿದ ಮಳೆ  ಮತ್ತು ದೇವರುಗಳಿಗೆ ಧನ್ಯವಾದ ಹೇಳಿದರು.

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ  ಸಿಎಂ ಯಡಿಯೂರಪ್ಪ, ವಿವಾದಾತ್ಮಕ ಅಮ್ಯೂಸ್ ಮೆಟ್ ಪಾರ್ಕ್ ವಿಷಯದ ಬಗ್ಗೆ ಯಾವುದೇ ಮಾತನಾಡಿಲ್ಲ, ತಮ್ಮ ಬಾಲ್ಯದಲ್ಲಿ ತಮ್ಮ ತಾತನ ಮನೆಯಲ್ಲಿ ಕಳೆದ ದಿನಗಳನ್ನು ಸ್ಮರಿಸಿದರು. ಕೆಆರ್ ಎಸ್ ಅಭಿವೃದ್ಧಿ ಗೊಳಿಸಲು ತಮಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ 12.20ಕ್ಕೆ ಕೆಆರ್‌ಎಸ್‌ ಹೆಲಿಪ್ಯಾಡ್‌ಗೆ ಕಾಪ್ಟರ್‌ನಲ್ಲಿ ಆಗಮಿಸಿದ ಸಿಎಂ ಯಡಿಯೂರಪ್ಪ ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿಜಲಾಶಯಕ್ಕೆ ತೆರಳಿದರು. 12.35ಕ್ಕೆ ಜಲಾಶಯದ ಪ್ರವೇಶ ದ್ವಾರದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ್‌,  ಕಂದಾಯ ಸಚಿವ ಆರ್ .ಅಶೋಕ್ ಮೈಸೂರು ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಶಾಸಕ ಎ.ಎಸ್‌.ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಯಡಿಯೂರಪ್ಪ ಅವರು ಜಲಾಶಯದ ಮೇಲಿನ ರಸ್ತೆಯಲ್ಲಿ ನಡೆದುಕೊಂಡೇ ಕಾವೇರಿ ಮಾತೆ ಪ್ರತಿಮೆಯ ಸ್ಥಳದ ಕಟ್ಟೆಯ ಮೇಲ್ಭಾಗದಲ್ಲಿ ಬಾಗಿನ ಸಲ್ಲಿಕೆಗೆ ನಿಗದಿಪಡಿಸಿದ್ದ ಸ್ಥಳಕ್ಕೆ ಆಗಮಿಸಿದರು. 

SCROLL FOR NEXT