ಬಸವಣ್ಣ 
ರಾಜ್ಯ

ತೆಲಂಗಾಣ ಶಾಲಾ ಪುಸ್ತಕದಲ್ಲಿ ಕ್ರಾಂತಿಯೋಗಿ ಬಸವಣ್ಣನವರ ಜೀವನ ಸಾಧನೆ ಕುರಿತ ಪಠ್ಯ

12ನೇ ಶತಮಾನದ  ಸಾಮಾಜಿಕ ಸುಧಾರಕ ಕ್ರಾಂತಿಯೋಗಿ ಬಸವಣ್ಣ ಗಂಡು-ಹೆಣ್ಣನ ಸಮಾನತೆ ಸಾರಿದವರು, ವಚನಗಳ ಮೂಲಕ ತಮ್ಮ ಆದ್ಯಾತ್ಮಿಕ ಅನುಭವ ಹಾಗೂ ಸಲಹೆಗಳನ್ನುು ನೀಡಿದವರು.

ಬೆಂಗಳೂರು: ತೆಲಂಗಾಣದ ಸರಕಾರಿ ಶಾಲಾ ಪಠ್ಯದಲ್ಲಿ'ವಿಶ್ವಗುರು ಬಸವಣ್ಣನವರ' ಜೀವನ ಚರಿತ್ರೆ ಸೇರಿಸಲು ಒಪ್ಪಿಗೆ ದೊರೆತಿದೆ.

12ನೇ ಶತಮಾನದ  ಸಾಮಾಜಿಕ ಸುಧಾರಕ ಕ್ರಾಂತಿಯೋಗಿ ಬಸವಣ್ಣ ಗಂಡು-ಹೆಣ್ಣನ ಸಮಾನತೆ ಸಾರಿದವರು, ವಚನಗಳ ಮೂಲಕ ತಮ್ಮ ಆದ್ಯಾತ್ಮಿಕ ಅನುಭವ ಹಾಗೂ ಸಲಹೆಗಳನ್ನುು ನೀಡಿದವರು. 

ಬಸವಣ್ಣನವರ ಜೀನ ಮತ್ತು ಸಾಧನೆಗಳ ಕುರಿತ ಮಾಹಿತಿಯನ್ನು ಶಾಲಾಪಠ್ಯ ದಲ್ಲಿ ಅಳವಡಿಸುವಂತೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು.  ಅದರ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಶಿಕ್ಷಣ ಸಂಶೋಧನಾ ಮಂಡಳಿ  ಒಪ್ಪಿಗೆ ನೀಡಿದೆ ಎಂದು ತೆಲಂಗಾಣ ಶಿಕ್ಷಣ ಕಾರ್ಯದರ್ಶಿ ಡಾ.ಬಿ ಜನಾರ್ದನ ರೆಡ್ಜಿ ತಿಳಿಸಿದ್ದಾರೆ. ತೆಲುಗು ಭಾಷೆ ಹಾಗೂ ಸಮಾಜ ವಿಜ್ಞಾನ ಪುಸ್ತಕದಲ್ಲಿ  ಪಠ್ಯ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನೂ ಕಾಲೇಜು ಮಟ್ಟದಲ್ಲಿ ಬಸವಣ್ಣ ಕುರಿತ ಪಠ್ಯ ಅಳವಡಿಸುವ ಸಂಬಂಧ ಸಂಶೋಧನೆ ನಡೆಸಿ ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ, ಇನ್ನೂ ತೆಲಂಗಾಣ ಸರ್ಕಾರದ ಈ ಕ್ರಮಕ್ಕೆ ಕರ್ನಾಟ ಹಲವು ಬರಹಗಾರರು ಸಂತಸ ವ್ಯಕ್ತ ಪಡಿಸಿದ್ದಾರೆ. ಬಸವಣ್ಣ ಕೇವಲ ಒಂದು ರಾಜ್ಯಕ್ಕೆ ಸೀಮಿತವಾದವರಲ್ಲ, ಅವರ ಭಕ್ತಿ ಸಂದೇಶ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!