ರಾಜ್ಯ

ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿಯಲ್ಲಿ 12 ವಿಶ್ರಾಂತಿ ಗೃಹ

Lingaraj Badiger

ಬೆಂಗಳೂರು: ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 12 ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.

ಬಿಟಿಎಂಸಿ ಪ್ರಮುಖ ಬಸ್ ನಿಲ್ದಾಣಗಳಾದ ಶಾಂತಿನಗರ, ಕೆಂಪೇಗೌಡ ಬಸ್ ನಿಲ್ದಾಣ, ಯಶವಂತಪುರ, ಯಲಹಂಕ ಒಲ್ಡ್‌ಟೌನ್, ಐ.ಟಿ.ಪಿ.ಎಲ್, ಬನ್ನೇರು ಘಟ್ಟ, ವಿಜಯನಗರ, ಕೆಂಗೇರಿ, ಕಾಡುಗೋಡಿ, ಬನಶಂಕರಿ, ದೊಮ್ಮಲೂರು, ಜೀವನ ಭೀಮನಗರ ಬಸ್ ನಿಲ್ದಾಣಗಳಲ್ಲಿ ಭಾರತ ಸರ್ಕಾರದ ನಿರ್ಭಯ ನಿಧಿ ಯೋಜನೆಯಡಿ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಪ್ರತ್ಯೇಕವಾಗಿ ಸುಸಜ್ಜಿತವಾದ ಲಾಂಜ್‌ನ್ನು(ವಿಶ್ರಾಂತಿ ಕೊಠಡಿ) ನಿರ್ಮಿಸಲಾಗಿದೆ.

ಈ ಲಾಂಜ್‌ನಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಕ್ಕಳಿಗೆ ಹಾಲು ಉಣಿಸುವ ಪ್ರತ್ಯೇಕ ಕೊಠಡಿ, ವಾಷ್ ರೊಮ್ ಮತ್ತು ಬಸ್ಸುಗಳ ಆಗಮನ/ನಿರ್ಗಮನದ ಬಗ್ಗೆ ತಿಳಿಯಲು ಗ್ಲಾಸ್‌ನ ಪಾರ್‌ಟಿಷನ್‌ಗಳು ಮತ್ತು ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಲಾಂಜ್ ಪುರುಷರ ಪ್ರವೇಶ ನಿಷೇಧಿಸಲಾಗಿದೆ.

SCROLL FOR NEXT