ರಾಜ್ಯ

ಉಡುಪಿ: ಉಪ ದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು

Nagaraja AB

ಉಡುಪಿ: ಜನರಿಗೆ ತೊಂದರೆ ಕೊಡುತ್ತಿದ್ದ ಗಂಡು  ಚಿರತೆಯನ್ನು ಬೋನಿಗೆ ಕೆಡುವಲ್ಲಿ  ಅರಣ್ಯ ಸಿಬ್ಬಂದಿ ಕೊನೆಗೂ   ಯಶಸ್ವಿಯಾಗಿದೆ.

ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಲಹಳ್ಳಿ ಬಳಿಯ ಯಾದಡಿ-ಮತ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಟ್ಟು ಪರಿಸರದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಮತ್ತೊಂದು ಗಂಡು ಚಿರತೆಯನ್ನು ಕೇವಲ ಹತ್ತು ದಿನಗಳೊಳಗೆ ಸೆರೆ ಹಿಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಚಿರತೆಗಳು ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಗುಡ್ಡಟ್ಟುವಿನ ಮನೆಯೊಂದರ ಬಳಿ ಬೋನು ಇರಿಸಿ ನವೆಂಬರ್ 26 ರಂದು ಗಂಡು ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೇ ಸ್ಥಳದಲ್ಲಿ ಇನ್ನೊಂದು ಚಿರತೆ ಇರುವ ಬಗ್ಗೆ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ  ಅದೇ ಜಾಗದಲ್ಲಿ ಬೋನನ್ನು ಇರಿಸಲಾಗಿತ್ತು. 

ಡಿಸೆಂಬರ್ 6 ರಂದು ರಾತ್ರಿ ವೇಳೆ ನಾಯಿ ಬೇಟೆಗೆ ಬಂದ ಚಿರತೆ ಈ ಬೋನಿನೊಳಗೆ ಸೆರೆಯಾಗಿದೆ. ಇದರಿಂದಾಗಿ  ಗುಡ್ಡಟುನಲ್ಲಿ  ಚಿರತೆ ಬಲೆಗೆ  ಸಿಕ್ಕಿಬಿದ್ದಿದ್ದು ಸದ್ಯ ಜನರು ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿದೆ.

SCROLL FOR NEXT