ಹಿಂದೂಗಳಿಗೆ ಪ್ರವಾಸ ವಿತರಣೆ: ಬಾವೈಕ್ಯತೆ ಮೆರೆದ ಮುಸ್ಲಿಮರು 
ರಾಜ್ಯ

ಹಿಂದೂಗಳಿಗೆ ಪ್ರಸಾದ ವಿತರಣೆ: ಭಾವೈಕ್ಯತೆ ಮೆರೆದ ಮುಸ್ಲಿಮರು

ಕೇವಲ ಹೇಳುವುದಕ್ಕಷ್ಟೇ ಅಲ್ಲ ಇಲ್ಲಿನ ಮುಸ್ಲಿಮರು ತಮ್ಮ ನಡವಳಿಕೆಯಲ್ಲಿಯೂ ಭಾವೈಕ್ಯತೆ ಮೆರೆದಿದ್ದಾರೆ. ಹನುಮ ಮಾಲಾದಾರಿಗಳು ಹಾಗೂ ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಜಭಾಗ ಸವಾರ್ ದರ್ಗಾದಲ್ಲಿರುವ ಮುಸ್ಲಿಮರು ಭ್ರಾತೃತ್ವ ಸಾರಿದ್ದಾರೆ. 

ಹೊಸಪೇಟೆ: ಕೇವಲ ಹೇಳುವುದಕ್ಕಷ್ಟೇ ಅಲ್ಲ ಇಲ್ಲಿನ ಮುಸ್ಲಿಮರು ತಮ್ಮ ನಡವಳಿಕೆಯಲ್ಲಿಯೂ ಭಾವೈಕ್ಯತೆ ಮೆರೆದಿದ್ದಾರೆ. ಹನುಮ ಮಾಲಾದಾರಿಗಳು ಹಾಗೂ ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಜಭಾಗ ಸವಾರ್ ದರ್ಗಾದಲ್ಲಿರುವ ಮುಸ್ಲಿಮರು ಭ್ರಾತೃತ್ವ ಸಾರಿದ್ದಾರೆ. 

ಬಳ್ಳಾರಿ, ಗದಗ ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿರುವ ರಾಜಭಾಗ ಸವಾರ್ ದರ್ಗಾದಲ್ಲಿ ಕಳೆದ ರಾತ್ರಿ ಮುಸ್ಲಿಮರ ಯುವಕರ ಪಡೆಯೊಂದು ಹನುಮ ಮಾಲಾದಾರಿಗಳು ಮತ್ತು ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. 

ಕೇವಲ ಮುಸ್ಲಿಮರಷ್ಟೇ ಅಲ್ಲ ಇಲ್ಲಿನ ಹಿಂದೂಗಳೂ ಕೂಡ ಮುಸ್ಲಿಮರು ಆಚರಿಸುವ ರಂಜಾನ್ ಉಪವಾಸ ಸಂದರ್ಭದಲ್ಲಿ ಇಪ್ತಿಯಾರ್ ಕೂಡ ನೀಡುತ್ತಾರೆ. 

ಈ ಮೂಲಕ ಇಲ್ಲಿನ ಹಿಂದೂ ಹಾಗೂ ಮುಸ್ಲಿಮರು ಹೊಸ ಪದ್ಧತಿಗೆ ನಾಂದಿ ಹಾಡಿದ್ದು, ಭಾವೈಕ್ಯತೆಯ ಕೇಂದ್ರದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಹುಡುಗಿ!

ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್