ರಾಜ್ಯ

ಕರ್ನಾಟಕ: 2019ರಲ್ಲಿ 612  ಅನ್ನದಾತರ ಆತ್ಮಹತ್ಯೆ

Shilpa D

ಕಲಬುರಗಿ: 2019ರ ಜನವರಿಯಿಂದ ನವೆಂಬರ್ ವರೆಗೆ ರಾಜ್ಯದಲ್ಲಿ ಸುಮಾರು 612 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿವೈ ಶ್ರೀನಿವಾಸ್ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಅವರು,  ರಾಜ್ಯಾದ್ಯಂತ 612 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿದೆ.  110 ಕೇಸ್ ಗಳಿಗೆ ಪರಿಹಾರ ತಿರಸ್ಕರಿಸಿಲಾಗಿದೆ, ಇನ್ನು 359 ಕೇಸ್ ಗಳಿಗೆ ಪರಿಹಾರ ನೀಡಲಾಗಿದೆ, 124 ಪ್ರಕರಣಗಳು ಅನುಮೋದನೆಗಾಗಿ ಕಾಯುತ್ತಿವೆ, 21 ಕೇಸ್ ಗಳ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ಪರಿಹಾರ  ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ,  ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಆತ್ಮಹತ್ಯೆ ದಾಖಲಾಗಿದೆ, ಅದರಲ್ಲಿ 37 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 18 ಪ್ರಕರಣಗಳಿಗೆ ಪರಿಹಾರ ತಿರಸ್ಕರಿಸಲಾಗಿದೆ.

ಮೈಸೂರು ಮತ್ತು ಧಾರವಾಡಗಳಲ್ಲಿ ತಲಾ 51 ಮಂದಿ, ಸಾವಿಗೆ ಶರಣಾಗಿದ್ದಾರೆ, ಮೈಸೂರಲ್ಲಿ 3 ಹಾಗೂ ಧಾರವಾಡದ19 ಕೇಸ್ ಗಳನ್ನು ತಿರಸ್ಕರಿಸಲಾಗಿದೆ.

SCROLL FOR NEXT