ರಾಜ್ಯ

ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭ

Vishwanath S

ರಾಯಚೂರು: ಇಲ್ಲಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ಕೇಂದ್ರ(ಆರ್ ಟಿಪಿಎಸ್)ದ ಒಟ್ಟು ಎಂಟು ಘಟಕಗಳ ಪೈಕಿ ಏಳು ಘಟಕಗಳು ಮಂಗಳವಾರ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ.

ತಲಾ 210 ಮೆಗಾ ವ್ಯಾಟ್ ಸಾಮಥ್ರ್ಯದ 2,3,4,5,6 ಮತ್ತು 7ನೇ ಘಟಕಗಳು ಹಾಗೂ 250 ಮೆಘಾ ವ್ಯಾಟ್ ಸಾಮಥ್ರ್ಯದ 8ನೇ ಘಟಕವು ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ ಎಂದು ಆರ್ ಟಿಪಿಎಸ್ ಮೂಲಗಳು ಬುಧವಾರ ತಿಳಿಸಿವೆ. ಈ ಏಳೂ ಘಟಕಗಳ ಒಟ್ಟು ಉತ್ಪಾದನೆ 1,300 ಮೆಗಾವ್ಯಾಟ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೇಡಿಕೆ ಕೊರತೆಯಿಂದ 8 ತಿಂಗಳ ಹಿಂದೆ ಆರ್ ಟಿಪಿಎಸ್ ಆಡಳಿತ ಮಂಡಳಿ ಅನೇಕ ಘಟಕಗಳನ್ನು ಮುಚ್ಚಿತ್ತು. ಆರ್ ಟಿಪಿಎಸ್‍ನ ಎಂಟು ಘಟಕಗಳ ಸಾಮಥ್ರ್ಯ 1,720 ಮೆಗಾವ್ಯಾಟ್ ಆಗಿದೆ. ಸ್ಥಾವರವು 10.50 ಲಕ್ಷ ಟನ್ ಸಂಗ್ರಹ ಸಾಮಥ್ರ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

SCROLL FOR NEXT