ರಾಜ್ಯ

ವಿಜಯಪುರ, ಕೊಪ್ಪಳ ಮತ್ತು ಬಸವಕಲ್ಯಾಣ ಆರ್ ಟಿಒಗಳಲ್ಲಿ ಚಾಲನಾ ಪರೀಕ್ಷಾ ಕೇಂದ್ರ ಆರಂಭ!

Sumana Upadhyaya

ಬೆಂಗಳೂರು: ರಾಜ್ಯದ ವಿಜಯಪುರ, ಕೊಪ್ಪಳ ಮತ್ತು ಬಸವಕಲ್ಯಾಣದಲ್ಲಿ ಹೊಸ ಮೂರು ಸ್ಥಳೀಯ ಸಾರಿಗೆ ಕಚೇರಿಗಳನ್ನು(ಆರ್ ಟಿಒ) ಸ್ಥಾಪಿಸಲು ಸಾರಿಗೆ ಇಲಾಖೆ ಮುಂದಾಗಿದೆ. 


ಅಲ್ಲದೆ ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರಗಳನ್ನು ಸಹ ಇಲ್ಲಿ ಸ್ಥಾಪಿಸಲು ಮುಂದಾಗಲಿದ್ದು ಇದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಜ್ಞಾನಭಾರತಿ ಮತ್ತು ಚಂದಾಪುರಗಳಲ್ಲಿರುವ ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರಗಳಿಗೆ (ಎಡಿಟಿಸಿ)ಸಮನಾಗಿ ಕೆಲಸ ಮಾಡಲಿದೆ. ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಸಹ ಇನ್ನೆರಡು ತಿಂಗಳಲ್ಲಿ ಇಂತಹ ವ್ಯವಸ್ಥೆ ಜಾರಿಗೆ ಬರಲಿದೆ.


ಎಡಿಟಿಸಿ ಕೇಂದ್ರಗಳನ್ನು ಕೋಲಾರ, ಬೆಳಗಾವಿ, ಧಾರವಾಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದು ಇನ್ನೊಂದು ವರ್ಷಗಳಲ್ಲಿ ಸಿದ್ದವಾಗಲಿದೆ. ರಾಜ್ಯಾದ್ಯಂತ ಇನ್ನಷ್ಟು ಆರ್ ಟಿಒಗಳನ್ನು ಸ್ಥಾಪಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.


ಪ್ರಸ್ತುತ ರಾಜ್ಯದಲ್ಲಿ ಶೇಕಡಾ 80ರಷ್ಟು ಆರ್ ಟಿಒ ಕೇಂದ್ರಗಳು ಸಾರಿಗೆ ಇಲಾಖೆ ಅಡಿಯಲ್ಲಿದ್ದು ಉಳಿದವು ಬಾಡಿಗೆ ಕಟ್ಟಡಗಳಲ್ಲಿವೆ. ಸಾರ್ವಜನಿಕರಿಂದ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಇನ್ನಷ್ಟು ಆರ್ ಟಿಒ ಕಚೇರಿಗಳನ್ನು ಸ್ಥಾಪಿಸಬೇಕಿದೆ ಎಂದು ಸಾರಿಗೆ ಇಲಾಖೆಯ ಇ-ಆಡಳಿತ ಮತ್ತು ಪರಿಸರ ವಿಭಾಗದ ಹೆಚ್ಚುವರಿ ಆಯುಕ್ತ ಶಿವರಾಜ್ ಪಾಟೀಲ್ ಹೇಳಿದ್ದಾರೆ. 


ಕರ್ನಾಟಕದಲ್ಲಿ ಪ್ರಸ್ತುತ 66 ಆರ್ ಟಿಒ ಕೇಂದ್ರಗಳಿವೆ.

SCROLL FOR NEXT