ರಾಜ್ಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪತ್ನಿ‌ ವಿಧಿವಶ, ಕಿಮ್ಸ್ ಆಸ್ಪತ್ರೆಗೆ ದೇಹದಾನ 

Raghavendra Adiga

ಬೆಂಗಳೂರು: ಹಿರಿಯ‌ ಸ್ವಾತಂತ್ರ್ಯ‌ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿಯವರ ಪತ್ನಿ‌ ಲಲಿತಮ್ಮ ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ 89 ವರ್ಷ ವಯಸಾಗಿತ್ತು.

ವಯೋಸಹಜ  ಕಾಯಿಲೆ, ಬಹುಅಂಗಾಗ ವೈಫಲ್ಯಗಳಿಂದ ಬಳಲುತ್ತಿದ್ದ ಅವರನ್ನು ಬಿಎಂಸಿಯ ಎಮರ್ಜೆನ್ಸಿ  ಅಂಡ್‌ ಟ್ರಾಮ ಕೇರ್‌ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪತಿ ಶತಾಯುಷಿ ಎಚ್‌.ಎಸ್‌ ದೊರೆಸ್ವಾಮಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ಜಯನಗರದ ನಾಲ್ಕನೇ ಟಿ ಬ್ಲಾಕ್‌‌ನ ಮನೆಗೆ ತಂದು ಅಂತಿಮ‌ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಕಿಮ್ಸ್‌ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ  ಎಚ್‌.ಎಸ್‌ ದೊರೆಸ್ವಾಮಿ ಹೇಳಿದ್ದಾರೆ.

SCROLL FOR NEXT