ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ವಿದ್ಯುತ್ ಕಟ್ ಮಾಡಿ ಆಡಿಟರ್ ಕಚೇರಿ ದೋಚಿದ ಕಳ್ಳರು

ವಿದ್ಯುತ್ ಕಟ್ ಮಾಡಿ ಆಡಿಟರ್ ಕಚೇರಿಯಿಂದ ಕಳ್ಳರು ಲಕ್ಷ ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ‌

ಸಾಂದರ್ಭಿಕ ಚಿತ್ರ
Shilpa D
Updated On : 18 Dec 2019, 1:54 pm

ಬೆಂಗಳೂರು;  ವಿದ್ಯುತ್ ಕಟ್ ಮಾಡಿ ಆಡಿಟರ್ ಕಚೇರಿಯಿಂದ ಕಳ್ಳರು ಲಕ್ಷ ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ‌. 

ಇದೇ ತಿಂಗಳು 13ರಂದು ಮಧ್ಯರಾತ್ರಿ ಹೆಲ್ಮೆಟ್ ಧರಿಸಿ ಬಂದ ಖದೀಮರು ಕಟ್ಟಿಂಗ್ ಪ್ಲೇಯರ್​ನಲ್ಲಿ ಸಿಸಿಟಿವಿಯ ವೈರ್ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. 

ಸುಮಾರು 13 ಲಕ್ಷ ನಗದು, ಮೂರು ಲ್ಯಾಪ್​​ಟಾಪ್ ಹಾಗೂ ಎರಡು ಮೊಬೈಲ್​ಗಳನ್ನು‌ ಕಳವು ಮಾಡಿದ್ದ ಕಳ್ಳರ ಕೈಚಳಕ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

Advertisement

Advertisement

ಘಟನೆ ನಡೆದು ನಾಲ್ಕು ದಿನ ಕಳೆದಿದ್ದು, ಆಡಿಟರ್ ಕಚೇರಿ ಮಾಲೀಕರು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಸಿಟಿ ಮಾರ್ಕೆಟ್‌ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement