ರಾಜ್ಯ

ಮಂಗಳೂರು ಹಿಂಸಾಚಾರ: ಗೋಲಿಬಾರ್'ನಲ್ಲಿ ಬಲಿಯಾದವರ ಹೆಸರೂ ಎಫ್ಐಆರ್'ನಲ್ಲಿ ದಾಖಲು!

Manjula VN

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ್ದ ಗೋಲಿಬಾರ್'ಗೆ ಇಬ್ಬರು ಬಲಿಯಾಗಿದ್ದರು. ಇದೀಗ ಈ ಇಬ್ಬರ ಹೆಸರೂ ಕೂಡ ಎಫ್ಐಆರ್ ನಲ್ಲಿ ದಾಖಲಾಗಿರುವುದು ಇದೀಗ ಬಹಿರಂಗಗೊಂಡಿದೆ. 

ಕಂದಕ್ ನವಾಸಿ ಅಬ್ದುಲ್ ಜಲೀಲ್, ಕುದ್ರೋಳಿ ನಿವಾಸಿ ನೌಶೀನ್ ಎಂಬುವವರು ಗೋಲಿಬಾರ್'ಗೆ ಬಲಿಯಾಗಿದ್ದರು. ಈ ಇಬ್ಬರು ಹೆಸರು ಸೇರಿದಂತೆ ಒಟ್ಟು 29 ಮಂದಿ ವಿರುದ್ಧ ಮಂಗಳೂ ಉತ್ತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಜಲೀಲಾ 3ನೇ ಹಾಗೂ ನೌಶೀನ್ 8ನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. 

ಡಿಸಿ ಕಚೇರಿ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು ಪೊಲೀಸ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರತಿಭಟನಾಕಾರರು ಬೈಕ್ ಬೆಂಕಿ ಹಚ್ಚಿದ್ದರು. ಕೂಡಲೇ ಪೊಲೀಸರು ಸಿಕ್ಕಸಿಕ್ಕವರನ್ನು ಹೊಡೆದರು. ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಈ ವೇಳೆ ಪೊಲೀಸರು ಯಶಸ್ವಿಯೂ ಆಗಿದ್ದರು. ಸಂಜೆ ವೇಳೆಗೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರ ಮೇಲೆ ಪ್ರತಿಭಟನಾಕಾರರನ್ನು ನಿರಂತರವಾಗಿ ಕಲ್ಲು ತೂರಿ, ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದರು. 

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಗುಂಡಿ ಹಾರಿಸಿದರು. ಕಲ್ಲೂ ತೂರಿದರು. ಕಟ್ಟವೊಂಜದರಲ್ಲಿ ಅಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ ಜನರು ದಿಕ್ಕೆಟ್ಟು ಓಡಲು ಆರಂಭಿಸಿದರು. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿರು. 

SCROLL FOR NEXT