ರಾಜ್ಯ

ಬೆಳಗಾವಿ: ಮನೆ ಹಾನಿ ಕುರಿತು ತಪ್ಪು ಮಾಹಿತಿ ನೀಡಿದ ನಾಲ್ವರು ಅಧಿಕಾರಿಗಳ ಅಮಾನತು

Lingaraj Badiger

ಬೆಳಗಾವಿ: ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ವಾಣಿಜ್ಯ ಕಟ್ಟಡಕ್ಕೆ ಮನೆಹಾನಿ ಎಂದು ತಪ್ಪು ವರದಿ ನೀಡಿದ ಆರೋಪದ ಮೇಲೆ ಕಂದಾಯ, ಲೋಕೋಪಯೋಗಿ ಮತ್ತು ಮಹಾನಗರ ಪಾಲಿಕೆಯ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಅನಗೋಳದ ಗ್ರಾಮ ಲೆಕ್ಕಿಗ ಎಸ್.ಜಿ.ಜೋಗಳೇಕರ, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕ ಸಿ.ಐ.ಬಿ.ಪಾಟೀಲ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಅವರನ್ನು ಜಿಲ್ಲಾಧಿಕಾರಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ.

ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಅನಗೋಳದ ಅರುಣ ಎನ್. ಗಾವಡೆ ಎಂಬುವರ ಗ್ಯಾರೇಜ್ ಕಟ್ಟಡವನ್ನು ವಾಸದ ಮನೆ ಎಂದು ತಪ್ಪು ವರದಿ ನೀಡಿದ್ದರು.

ಸರ್ಕಾರದಿಂದ ಅವರ ಖಾತೆಗೆ ಒಂದು ಲಕ್ಷ ರೂಪಾಯಿ ಮೊದಲ ಕಂತಿನ ಪರಿಹಾರದ ಹಣವನ್ನು ಸಹ ಜಮೆ ಮಾಡಲಾಗಿತ್ತು.

ತಪ್ಪು ವರದಿ ಆಧಾರದ ಮೇಲೆ ಅನರ್ಹರಿಗೆ ಪರಿಹಾರದ ಮೊತ್ತ ಜಮೆಯಾಗಿರುವುದರಿಂದ ಕೆಂಡಮಂಡಲವಾಗಿರುವ ಜಿಲ್ಲಾಧಿಕಾರಿ ಅವರು, ಪ್ರಾಥಮಿಕ ತನಿಖಾ ವರದಿ ಆಧಾರದ ಮೇಲೆ ಅಮಾನತು ಮಾಡಿದ್ದಾರೆ.

SCROLL FOR NEXT