ರಾಜ್ಯ

ಅವಹೇಳಕಾರಿ ಪೋಸ್ಟ್: ಕುಂದಾಪುರ ವ್ಯಕ್ತಿಯ ಖಾತೆಯ ಬಗ್ಗೆ ಫೇಸ್‌ಬುಕ್‌ನಿಂದ ಮಾಹಿತಿ  ಕೇಳಿದ ಪೋಲೀಸರು

Raghavendra Adiga

ಉಡುಪಿ: ಸೌದಿ ಅರೇಬಿಯಾ ದೊರೆ ಹಾಗೂ ಮೆಕ್ಕಾದ ಬಗೆಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಬಂಧಿಸಲ್ಪಟ್ಟಿರುವ ಕುಂದಾಪುರ ಮೂಲದ ಹರೀಶ್ ಬಂಗೇರಅವರನ್ನು ಬಿಡುಗಡೆ ಮಾಡುವ ಪ್ರಯತ್ನದಲ್ಲಿ, ಉಡುಪಿ ಜಿಲ್ಲಾ ಪೊಲೀಸರು ಫೇಸ್‌ಬುಕ್‌ಗೆ ಪತ್ರವೊಂದನ್ನು ಬರೆದಿದ್ದು, ಹರೀಶ್ ಹೆಸರಿನಲ್ಲಿ ಎರಡನೇ ಫೇಸ್‌ಬುಕ್ ಖಾತೆಯನ್ನು ಯಾವ ಐಪಿ ಸಂಖ್ಯೆಯಿಂದ ರಚಿಸಲಾಗಿದೆ ಎಂದು ಪರಿಶೀಲಿಸುವಂತೆ ಕೋರಿದ್ದಾರೆ. ಆಕ್ಷೇಪಾರ್ಹ' ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗಿರುವ ಹರೀಶ್ ಅವರ ಹೆಸರಲ್ಲಿನ ನಕಲಿ ಖಾತೆಯನ್ನು ಯಾರು ರಚಿಸಿದ್ದಾರೆ ಎನ್ನುವ ಬಗೆಗೆ ತನಿಖೆ ಕೈಗೊಂಡಿರುವ ಪೋಲೀಸರು ಹರೀಶ್ ತಾವು ಕೆಲ್ಸಕ್ಕೆ ಸೌದಿ ಅರೇಬಿಯಾಗೆ ತೆರಳುವ ಮುನ್ನ ತಮ್ಮ ಸ್ವಂತ ಊರಾದ ಕುಂದಾಪುರದಲ್ಲಿ ಯಾವ ಅಪರಾಧ ಹಿನ್ನೆಲೆಯನ್ನೂ ಹೊಂದಿರಲಿಲ್ಲ ಎಂದು ವಿವರಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಬೀಜಾಡಿ ಗ್ರಾಮದ 32 ವರ್ಷದ ಹರೀಶ್ ಬಂಗೇರ ತರಬೇತಿ ಪಡೆದ ಹವಾನಿಯಂತ್ರಣ ಯಂತ್ರದ (ಎಸಿ) ಮೆಕ್ಯಾನಿಕ್ ಆಗಿದ್ದು ಅವರು ದಮ್ಮಂನಲ್ಲಿರುವ ಗಲ್ಫ್ ಕಾರ್ಟನ್ ಕಾರ್ಖಾನೆಗೆ ಸೇರಲು ಮಾರ್ಚ್ 2014 ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. . ಅವರು ಡಿಸೆಂಬರ್ 19 ಭಾರತದ ತಮ್ಮ ಸ್ನೇಹಿತರೊಬ್ಬರಿಂದ ಸ್ವೀಕರಿಸಿದ್ದ ಮಂಗಳೂರು ಗಲಭೆಯ ಕುರಿತ ವೀಡಿಯೋ ವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ತರುವಾಯ, ಆ ವಿಡಿಯೋ ಅನಗತ್ಯ ಎಂದು ಭಾವಿಸಿ ಅದನ್ನು ತನ್ನ ಖಾತೆಯಿಂದ ಅಳಿಸಿ ಹಾಕಿದ್ದ ಬಂಗೇರ ವಿವಾದವನ್ನು ಕೊನೆಗೊಳಿಸುವ ಸಲುವಾಗಿ, ಅವರು ತಮ್ಮ ‘ಅನಗತ್ಯ’ ಪೋಸ್ಟ್‌ಗೆ ಕ್ಷಮೆಯಾಚಿಸುವ ವೀಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಅವರು ತಮ್ಮ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. 

ಆದರೆ ಡಿಸೆಂಬರ್ 20 ರಂದು, ಒಬ್ಬ ದುಷ್ಕರ್ಮಿ ಬಂಗೇರ ಹೆಸರಲ್ಲಿ  ಮತ್ತೊಂದು ಖಾತೆಯನ್ನು ರಚಿಸಿ ಅವರ ಹಲವು ಭಾವಚಿತ್ರಗಳನ್ನು ಹಾಕಿದ್ದಾನೆ. ಮರುದಿನ, ಎರಡು ‘ಹೆಚ್ಚು ಆಕ್ಷೇಪಾರ್ಹ ಮತ್ತು ಧರ್ಮನಿಂದೆಯ’ ವಿಚಾರಗಳುಳ್ಳ ಪೋಸ್ಟ್ ಮಾಡಲಾಗಿದೆ. ಅವರ ಪತ್ನಿ ಸುಮನಾ ಈ ವಿಷಯವನ್ನು ಅವರ ಗಮನಕ್ಕೆ ತರುವವರೆಗೂ ಬಂಗೇರ ಅವರ ಗಮನಕ್ಕಿದು ಬಂದಿರಲಿಲ್ಲ. ಅವರು ಇದನ್ನು ಸೌದಿ ಅರೇಬಿಯನ್ ಪೊಲೀಸರ ಮುಂದೆ ತರುವ ಮೊದಲು, ಈ ಕಾಮೆಂಟ್‌ಗಳು ವೈರಲ್ ಆಗಿದ್ದವು. ಗಲ್ಫ್ ಕಾರ್ಟನ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಎಂಗರ್ ಮೆಶಾರಿ ಎ ಎಂ ಅಲ್-ಜಬ್ರ್ ಬಂಗೇರಾ ಅವರನ್ನು ವಜಾಗೊಳಿಸಿದರು ಮತ್ತು ಸೌದಿ ಅರೇಬಿಯಾದ ಪೊಲೀಸರು ಆತನನ್ನು ಬಂಧಿಸಿದರು. ಕುಂದಾಪುರದಲ್ಲಿರುವ ಅವರ ಕುಟುಂಬ ಸದಸ್ಯರಿಗೆ ಅವರ ವಿರುದ್ಧದ ಆರೋಪಗಳ ಬಗ್ಗೆ ಇನ್ನೂ ತಿಳಿದಿಲ್ಲ.

"ನಾವು ವಿವರಗಳನ್ನು ಸ್ವೀಕರಿಸಿದ ನಂತರ, ಹರೀಶ್ ಅವರ ನಿರಪರಾಧಿತ್ವ ಸಾಬೀತಿಗಾಗಿ ನಾವು ಸೌಂದಿ ಪೋಲೀಸರನ್ನು ಸಂಪರ್ಕಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

SCROLL FOR NEXT