ರಾಜ್ಯ

ಬೆಳಗಾವಿಯಲ್ಲಿ ಹೆದ್ದಾರಿ ನಿರ್ಮಾಣದಿಂದ 22 ಸಾವಿರ ಮರಗಳಿಗೆ ಕೊಡಲಿ: ಪರಿಸರವಾದಿಗಳಿಂದ ತೀವ್ರ ವಿರೋಧ

Sumana Upadhyaya

ಬೆಳಗಾವಿ: ಖಾನಾಪುರದಿಂದ ಲೋಂಡಾದವರೆಗೆ ರಾಷ್ಟ್ರೀಯ ಹೆದ್ದಾರಿ4-ಎಯ ವಿಸ್ತರಣೆಗೆ ಸುಮಾರು 22 ಸಾವಿರ ಮರಗಳು ಧರೆಗುರುಳಲಿದ್ದು ಅದಕ್ಕೆ ತಡೆ ನೀಡಬೇಕೆಂದು ಕೋರಿ ಪರಿಸರವಾದಿ ಸುರೇಶ್ ಹೆಬ್ಳೀಕರ್ ಮತ್ತು ಇನ್ನಿಬ್ಬರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಿಗೆ ಉತ್ತರ ನೀಡುವಂತೆ ನೊಟೀಸ್ ಜಾರಿ ಮಾಡಿದೆ.

ದಾಂಡೇಲಿ ವನ್ಯಮೃಗ ಅಭಯಾರಣ್ಯದ ಮೀಸಲು ಅರಣ್ಯ ಮತ್ತು ಆನೆ ಮೀಸಲು ಅರಣ್ಯ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ 4-ಎ ಹಾದುಹೋಗುತ್ತದೆ.

SCROLL FOR NEXT