ರಾಜ್ಯ

ಮೌಂಟ್ ಎವರೆಸ್ಟ್ ಏರಿ, ಸಿಇಟಿ ಮೂಲಕ ಎನ್ ಸಿಸಿ ಮೀಸಲಾತಿ ಪಡೆಯಿರಿ

Sumana Upadhyaya

ಬೆಂಗಳೂರು: ಮೌಂಟ್ ಎವರೆಸ್ಟ್ ಹತ್ತಿದರೆ ಎನ್ ಸಿಸಿ ಕೋಟಾದಡಿ ವೃತ್ತಿನಿರತ ಪದವಿ ಕೋರ್ಸ್ ಗಳಿಗೆ ಸಿಇಟಿ ಮೂಲಕ ಪ್ರವೇಶ ಪಡೆಯುವ ಅವಕಾಶವಿದೆ. ಇದು ಕೇವಲ ಮೌಂಟ್ ಎವರೆಸ್ಟ್ ಹತ್ತಿದ ಎನ್ ಸಿಸಿ ಕೆಡೆಟ್ ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಈ ವರ್ಷ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ ನಿಯಮದಲ್ಲಿ ತಿದ್ದುಪಡಿ ತರಲಾಗಿದ್ದು ಅದರಡಿ ಎನ್ ಸಿಸಿ ಅಭ್ಯರ್ಥಿಗಳಿಗೆ ಇರುವ ಮೀಸಲಾತಿಯನ್ನು ಪರಿಷ್ಕರಿಸಲಾಗಿದೆ. ಸಿಇಟಿ 2019ಕ್ಕೆ ಅದು ಅನ್ವಯವಾಗುತ್ತದೆ. ಯುವ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಮೀಸಲಾತಿ ತರಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಹತ್ತನೇ ತರಗತಿ ಮಕ್ಕಳು ಕೂಡ ಮೌಂಟ್ ಎವರೆಸ್ಟ್ ಹತ್ತುತ್ತಾರೆ. ಹೀಗಾಗಿ ಪಿಯುಸಿ ಮುಗಿದ ಮೇಲೆ ಸಿಇಟಿ ಮೂಲಕ ಎನ್ ಸಿಸಿ ಕೆಡೆಟ್ ಗಳಿಗೆ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ ಎನ್ನುತ್ತಾರೆ ಕೆಇಎ ಅಧಿಕಾರಿಗಳು.ಟ್ರೆಕ್ಕಿಂಗ್ ಮತ್ತು 5,500 ಮೀಟರ್ ಎತ್ತರದವರೆಗೆ ಹತ್ತಿದವರಿಗೂ ಸಹ ಮೀಸಲಾತಿ ಪಡೆಯುವ ಸೌಲಭ್ಯವಿದೆ.

SCROLL FOR NEXT