ಸಾಂದರ್ಭಿಕ ಚಿತ್ರ 
ರಾಜ್ಯ

ಮಹಿಳಾ ಪೊಲೀಸ್ ಪೇದೆಯ ಚಿನ್ನದ ಸರ ಕದ್ದ ಚಾಲಾಕಿ

ಸರಗಳ್ಳತನ ಹಾಗೂ ಪಿಕ್ ಪಾಕೆಟ್ ಸಂಬಂಧಿತ ಪ್ರಕರಣಗಳ ಕೇಸ್ ನೋಡಿಕೊಳ್ಳುತ್ತಿದ್ದ ಮಹಿಳಾ ಪೇದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಕೆ,ಆರ್ ..

ಬೆಂಗಳೂರು: ಸರಗಳ್ಳತನ ಹಾಗೂ ಪಿಕ್ ಪಾಕೆಟ್ ಸಂಬಂಧಿತ ಪ್ರಕರಣಗಳ ಕೇಸ್ ನೋಡಿಕೊಳ್ಳುತ್ತಿದ್ದ  ಮಹಿಳಾ ಪೇದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಕೆ,ಆರ್ ಮಾರುಕಟ್ಟೆಯಲ್ಲಿ ನಡೆದಿದೆ.
ಹೈಗ್ರೌಂಡ್ ಪೊಲೀಸ್ ಠಾಣೆಯ ಪೇದೆ ಪದ್ಮಾವತಿ ಅವರ ಚಿನ್ನದ ಸರ ಕಳ್ಳತನವಾಗಿದೆ, ಶಾಂತಿನಗರದ ಬರೇಲಿ ಸ್ಟ್ರೀಟ್ ನ ಪೊಲೀಸ್ ಕ್ವಾರ್ಟರ್ಸ್ ನಿವಾಸಿ ಪದ್ಮಾವತಿ ಶಾಪಿಂಗ್ ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಸಂಜೆ 7.30 ರ ಸುಮಾರಿಗೆ ಪದ್ಮಾವತಿ ಅವರು ಕೆ.ಆರ್ ಮಾರುಕಟ್ಟೆಗೆ ತಲುಪಿದ್ದರು, ಅವರಿಗೆ ತಮ್ಮ ಸರ ಗಳ್ಳತನ ಆಗಿರುವುದು ಅರಿವಿಗೆ ಬಂದಿತ್ತು, ಅಲ್ಲಿ ಅನುಮಾನಾಸ್ಪದ ವ್ಯಕ್ತಿ ಯಾರಾದರೂ ಇದ್ದಾರೆಯೇ ಎಂದು ಹುಡುಕಾಟ ನಡೆಸಿದರು, ಆದರೆ ಅಲ್ಲಿ ಯಾರು ಇರಲಿಲ್ಲ, ಕೂಡಲೇ ಅವರು ನೇರವಾಗಿ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು 15 ಗ್ರಾಂ ತೂಕದ ಚಿನ್ನದ ಸರ 30 ಸಾವಿರ ರು ಬೆಲೆ ಬಾಳುವಂತದ್ದು ಎಂದು ಹೇಳಿದ್ದಾರೆ.
ಪದ್ಮಾವತಿ ಮಾರುಕಟ್ಟೆಯಲ್ಲಿ ಕಳೆದುಕೊಂಡಿದ್ದಾರೋ ಅಥವಾ ಬಸ್ ನಲ್ಲಿ ಕಳೆದುಕೊಂಡಿದ್ದಾರೋ ಎಂಬ ಬಗ್ಗೆ ನಮಗೆ ಸರಿಯಾದ ಮಾಹಿತಿಯಿಲ್ಲ, ಅಲ್ಲಿ ಯಾವುದೇ ಶಾಪ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ ಹೀಗಾಗಿ ಅಲ್ಲಿ ಯಾವುದೇ ಸುಳಿವು ಸಿಗಲಿಲ್ಲ, ಹೀಗಾಗಿ ಜನರು ಮಾರುಕಟ್ಟೆಗೆ ತೆರಳುವಾಗ ಚಿನ್ನ ಧರಿಸುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ  ಪದ್ಮಾವತಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ