ರಾಜ್ಯ

ಹೊಸ ತಾಲ್ಲೂಕುಗಳ ರಚನೆಯಾಯ್ತು; ಕಚೇರಿಯಿಲ್ಲ, ಸಿಬ್ಬಂದಿಯಿಲ್ಲ!

Sumana Upadhyaya

ಕಲಬುರಗಿ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ರಚನೆಗೊಂಡಿದ್ದ 49 ಹೊಸ ತಾಲ್ಲೂಕುಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದ 17 ತಾಲ್ಲೂಕುಗಳಲ್ಲಿ ಇನ್ನೂ ಆಡಳಿತ ಕಚೇರಿಗಳು ಪ್ರಾರಂಭಗೊಂಡಿಲ್ಲ. ಕಂದಾಯ ಇಲಾಖೆ ಕಚೇರಿ ಹೊರತುಪಡಿಸಿ ಬೇರೆ ಯಾವುದೇ ತಾಲ್ಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ.

ಅಧಿಕೃತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ತಹಶಿಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳು ಹೊಸ ತಾಲ್ಲೂಕುಗಳಲ್ಲಿ ಭಾಗಶಃ ಕೆಲಸ ಮಾಡುತ್ತಿವೆ. ಹೊಸ ತಾಲ್ಲೂಕುಗಳಿಗೆ ಸರ್ಕಾರ ತಹಸಿಲ್ದಾರ್ ಗಳನ್ನು ನೇಮಕ ಮಾಡಿದೆ ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಪುಟ್ಟನಂಜಯ್ಯ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದರೂ ಕೂಡ ವಾಸ್ತವ ಸ್ಥಿತಿ ಬೇರೆಯಾಗಿಯೇ ಇದೆ.

ಕಲಬುರಗಿಯ ಯಡ್ರಮಿ ಸೇರಿದಂತೆ ಹಲವು ಹೊಸ ತಾಲ್ಲೂಕುಗಳಲ್ಲಿ ತಹಸಿಲ್ದಾರ್ ಗಳೇ ಇಲ್ಲ. ಇನ್ನು ಹಲವು ತಾಲ್ಲೂಕುಗಳಲ್ಲಿ ಕೇವಲ ಒಬ್ಬರೊ, ಇಬ್ಬರೊ ಅಧಿಕಾರಿಗಳು ಇದ್ದಾರಷ್ಟೆ. ಹೊಸ ತಾಲ್ಲೂಕುಗಳಿಗೆ ನೇಮಕವಾದ ಅಥವಾ ವರ್ಗವಾದ ಸಿಬ್ಬಂದಿ ಹೊಸ ಕಚೇರಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈ ಹುದ್ದೆಗಳು ಖಾಲಿಯಿವೆ ಎಂದು ತಿಳಿದುಬಂದಿದೆ.

SCROLL FOR NEXT