ರಾಜ್ಯ

ಸಾಹಿತ್ಯ ಅಕಾಡಮಿ ಪ್ರಶಸ್ತಿ: ವಿವೇಕ ರೈ, ವೆಂಕಟೇಶಮೂರ್ತಿ ಸೇರಿ ಐವರಿಗೆ ಗೌರವ ಪುರಸ್ಕಾರ

Raghavendra Adiga
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು ಹಿರಿಯ ಸಂಶೋಧಕ ಬಿ.ಎ. ವಿವೇಕ ರೈ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಸೇರಿ ಐವರಿಗೆ ಗೌರವ ಪುರಸ್ಕಾರ ಲಭಿಸಿದೆ. ಇದೇ ವೇಳೆ ಸಾಹಿತಿ,ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ "ಸಾಹಿತ್ಯ ಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕಾಡಮಿ ಅಧ್ಯಕ್ಷ ಅರವಿಂದ ಮಾಲಗತ್ತಿ 2018ನೇ ಸಾಲಿನ ಪ್ರಶಸ್ತಿ ವಿಜೇತರ ಹೆಸರುಗಳನ್ನು ಘೋಷಿಸಿದ್ದಾರೆ.
ತಲಾ 50 ಸಾವಿರ ನಗದು, ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುವ ಗೌರವ ಪ್ರಶಸ್ತಿಗೆ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಎ. ವಿವೇಕ ರೈ, ದೇಶಾಂಶ ಹುಡಗಿ, ಕಾದಂಬರಿಗಾರ್ತಿ ಸಾಯಿಸುತೆ, ಪ್ರೊ. ಎ.ಕೆ. ಹಂಪಣ್ಣ ಭಾಜನರಾಗಿದ್ದಾರೆ.
10 ಸಾವಿರ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡ "ಸಾಹಿತ್ಯ ಶ್ರೀ" ಪ್ರಶಸ್ತಿಗೆ ಪುರುಷೋತ್ತಮ ಬಿಳಿಮಲೆ, ಎಚ್.ಎಲ್. ಪುಷ್ಪ, ಕೆ.ಸಿ. ಶಿವಪ್ಪ, ಸಿ.ಪಿ. ಸಿದ್ದಾಶ್ರಮ, ಪಾರ್ವತಿ ಜಿ. ಐತಾಳ್, ಜಿ. ಕೃಷ್ಣಪ್ಪ, ಸತೀಶ್ ಕುಲಕರ್ಣಿ, ಅಬ್ದುಲ್ ಜಿ. ಬಷೀರ್ ಹಾಗೂ ಗಂಗಾರಾಮ್ ಚಂಡಾಳ ಅವರುಗಳು ಆಯ್ಕೆಯಾಗಿದ್ದಾರೆ.
SCROLL FOR NEXT