ರಾಜ್ಯ

ಆಡಿಯೋ ಟೇಪ್ ಪ್ರಕರಣ: ಯಡಿಯೂರಪ್ಪ ಆ ಮಾತು ಹೇಳಿಲ್ಲ-ರಮೇಶ್ ಕುಮಾರ್ ಪ್ರತಿಕ್ರಿಯೆ

Srinivas Rao BV
ಶಾಸಕ ನಾಗನಗೌಡ ಪುತ್ರ ಶರಣಗೌಡ ಜೊತೆ ಯಡಿಯೂರಪ್ಪ ಮಾತನಾಡಿ "ಆಫರ್" ನೀಡಿದ್ದರು ಎನ್ನಲಾದ ಆಡಿಯೋ ಟೇಪ್ ಕುರಿತಂತೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 
ಫೆ.08 ರಂದು ಹೆಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಯಡಿಯೂರಪ್ಪ ಶರಣಗೌಡ ಜೊತೆ ಮಾತನಾಡಿ ಬಿಜೆಪಿ ಸೇರುವಂತೆ ಆಫರ್ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೇ ಆಡಿಯೋದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜಡ್ಜ್ ಗಳನ್ನೂ ಸಹ ನಾವು ಬುಕ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ ಎಂದು ಆರೋಪಿಸಲಾಗಿತ್ತು. 
ಈ ಆಡಿಯೋ ಟೇಪ್ ಬಗ್ಗೆ ರಮೇಶ್ ಕುಮಾರ್ ಬಜೆಟ್ ಮುಕ್ತಾಯಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದು ಯಡಿಯೂರಪ್ಪ ಸ್ಪೀಕರ್ ಹಾಗೂ ಜಡ್ಜ್ ಗೆ ಸಂಬಂಧಿಸಿದಂತೆ ಆ ಮಾತು ಹೇಳಿಲ್ಲ. ನಾನು ಸಂಪೂರ್ಣವಾಗಿ ಆಡಿಯೋ ಕೇಳಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ಅವರು ಸ್ಪೀಕರ್ ಹಾಗೂ ನ್ಯಾಯಾಧೀಶರ ಬಗ್ಗೆ ಆ ಮಾತು ಹೇಳಿಲ್ಲ.  ಆಡಿಯೋದಲ್ಲಿ ಯಾರು ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. 
ಆ ಮಾತನ್ನು ಮೂರನೆಯವರು ಮಾತನಾಡಿರಬಹುದು, ಅದು ಯಾರು ಗೊತ್ತಿಲ್ಲ, ಹಾಗಿದ್ದರೂ ಸೋಮವಾರದ ಕಲಾಪದಲ್ಲಿ ನಾನೇ ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. 
SCROLL FOR NEXT