ರಾಜ್ಯ

ಬೆಂಗಳೂರು: ಮಹಿಳಾ ಸ್ನೇಹಿತರ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿ ನೇಣಿಗೆ ಶರಣು

Raghavendra Adiga
ಬೆಂಗಳೂರು: ಸಾಮಾಜಿಕ ತಾಣದ ಮೂಲಕ ಪರಿಚಯವಾಗಿದ್ದ ಇಬ್ಬರು ಮಹಿಳೆಯರು ಯುವಕನೊಬ್ಬನಿಗೆ ಕಿರುಕುಳ ನೀಡಿದ ಕಾರಣ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕನಿಗೆ ಸಾಮಾಜಿಕ ತಾನಾದಲ್ಲಿ ಪರಿಚಯವಾಗಿದ್ದ ಮಹಿಳೆಯರು ದಿನನಿತ್ಯ ಚಾಟ್ ಮಾಡುತ್ತಿದ್ದರು. ಕಡೆಗೊಮ್ಮೆ ಅವರು ಯುವಕನ ಬಳಿ ಹಣದ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾದನೆಂದು ಆತನ ಪೋಷಕರು ಆರೋಪಿಸ್ದ್ದಾರೆ.
ಮೂಲತಃಅ ಕಲಬುರ್ಗಿಯ ಜೇವರ್ಗಿಯವನಾದ ಅತೀಶ್ ಎಸ್. ನಾಯಕ್ ನೇಣಿಗೆ ಶರಣಾದ ಯುವಕ. ಈತ ಬೆಂಗಳೂರಿನ ಹಾರಿಝಾನ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಕಾಡುಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಶ್ರೀರಾಮ್ ಪಿಜಿನಲ್ಲಿ ವಾಸಿಸಿದ್ದನು.
ಫೆ.9ರಂದು ಯುವಕ ತನ್ನ ಕೋಣೆಯಲ್ಲಿದ್ದ ಸೀಲಿಂಗ್ ಫಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಇನ್ನಿಬ್ಬರು ರೂಮ್ ಮೇಟ್ ಗಳು ಕಾಲೇಜು ಮುಗಿಸಿ ಹಿಂತಿರುಗಿದಾಗ ಈ ಘಟನೆ ಬೆಳಕು ಕಂಡಿದೆ.
ಯುವಕ ನಾಯಕ್ ತಂದೆ ಸುಭಾಷ್ ನಿಡಿರುವ ದೂರಿನಂತೆ ನಾಯಕ್ ಇಬ್ಬರು ಮಹಿಳೆಯರಿಂದ ಕಿರುಕುಳಕ್ಕೀಡಾಗಿದ್ದನು. ಈತ ಆತ್ಮಹತ್ಯೆಗೆ ಮುನ್ನ ಬರೆದಿದ್ದ ಡೆತ್ ನೋಟ್ ನಲ್ಲಿ ಸಹ "ನೀವು ನನ್ನ ಪೋಷಕರು ಹಾಗೂ ಸೋನಿಯಾ, ಪ್ರಕೃತಿಯವರಿಗೆ ಮಾಹಿತಿ ತಿಳಿಸಿ" ಎಂದಷ್ಟೇ ಬರೆದಿದ್ದನು. ಪಿಜಿ ಮಾಲೀಕರು ಸುಭಾಷ್ ಅವರಿಗೆ ಅವರ ಮಗನ ಕೃತ್ಯದ ಕುರಿತು ಕರೆ ಮಾಡಿ ತಿಳಿಸ್ದ್ದಾರೆ.
"ಇಬ್ಬರು ಶಂಕಿತರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ಮತ್ತು ಬೆದರಿಕೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಇಬ್ಬರು ಮಹಿಳಾರು ಯಾರು ಎಂದು  ನಾಯಕ್ ಬರೆದಿರುವ ಮೊಬೈಲ್ ಸಂಖ್ಯೆ ಬಳಸಿ ತಿಳಿದುಕೊಳ್ಳಬೇಕಿದೆ"
ಶನಿವಾರ, ನಾಯಕ್ ಕಾಲೇಜಿಗೆ ಹೋಗಲಿಲ್ಲ, ಮತ್ತು ಅವನ ಸ್ನೇಹಿತರು ಅವನನ್ನು ಕರೆದಾಗ, ಅವರು ಮೊಬೈಲ್ ಫೋನ್  ರಿಸೀವ್ ಮಾಡಿಲ್ಲ. ಆತ ಯುವತಿಯರೊಡನೆ ಸ್ವಲ್ಪ ಕಾಲ ಚಾಟ್ ಮಾಡಿದ್ದ. ಆದರೆ ಬಳಿಕ ಏನಾಗಿದೆ ಎನ್ನುವುದು ತಿಳಿದಿಲ್ಲ. ಅಲ್ಲದೆ ನಾಯಕ್ ತನ್ನ ಹಳೆ ಮೊಬೈಲ್ ಬದಲಿಸಿ ಹೊಸ ಫೋನ್ ಖರೀದಿಸಿದ್ದ. ಹಳೆ ಮೊಬೈಲ್ ನಲ್ಲಿ ನಾವು ಇನ್ನಷ್ಟು ಮಾಹಿತಿ ಪಡೆಯಲು ಸಾಧ್ಯವಿತ್ತು ಎಂದು ಪೋಲೀಸ್ ಅಧಿಕಾರಿ ಹೇಳಿದ್ದಾರೆ.
SCROLL FOR NEXT