ಸಂಗ್ರಹ ಚಿತ್ರ 
ರಾಜ್ಯ

ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ: ಖಾನಾಪುರದಲ್ಲಿ ರೈಲುಗಳ ನಿಲುಗಡೆ- ಅನಂತ್ ಕುಮಾರ್ ಹೆಗಡೆ

ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.

ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.

ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವ ನೆರವೇರಲಿದ್ದು, ಲಕ್ಷಾಂತರ ಜನ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಆದ್ದರಿಂದ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳನ್ನು ನಿಲುಗಡೆ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ರೈಲು ನಿಲುಗಡೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು-ಅಜ್ಮಿರ್ ಗರಿಬ್ ನವಾಜ್ ಎಕ್ಸ್ ಪ್ರೆಸ್ (16532), ಅಜ್ಮಿರ್-ಬೆಂಗಳೂರು ಗರಿಬ್ ನವಾಜ್ (16531), ಬೆಂಗಳೂರು-ಭಗತ್ ಕಿ ಕೋಠಿ ಗರಿಬ್ ನವಾಜ್ (16534), ಭಗತ್ ಕಿ ಕೋಠಿ -ಬೆಂಗಳೂರು ಗರಿಬ್ ನವಾಜ್ (16533), ಪುಣೆ-ಎರ್ನಾಕುಲಂ ಎಕ್ಸಪ್ರೆಸ್ (11097), ಎರ್ನಾಕುಲಂ-ಪುಣೆ ಎಕ್ಸಪ್ರೆಸ್ (11098), ಮುನುಗುರು-ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸಪ್ರೆಸ್  (11303), ಹಾಗೂ ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸ ಪ್ರೆಸ್ (11304) ರೈಲುಗಳು ಖಾನಾಪುರ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ಹೆಗಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

1993ರಲ್ಲಿ 3 ಎಕರೆ ಇದ್ದ ಆಸ್ತಿ 2018ಕ್ಕೆ 1,400 ಕೋಟಿ ಹೇಗಾಯ್ತು?: ರೈತರಿಗೂ ಶ್ರೀಮಂತರಾಗುವ ಮಾರ್ಗ ಹೇಳಿಕೊಡಿ; ಕುಮಾರಸ್ವಾಮಿ

ಕಾಂಗ್ರೆಸ್‌ನಲ್ಲಿ Muslim ಕೋಟಾಕ್ಕೆ ಪೈಪೋಟಿ; ಜಮೀರ್ ಪರ DK brothers ಬ್ಯಾಟಿಂಗ್, ಹೈಕಮಾಂಡ್ ಮೇಲೆ ಒತ್ತಡ..!

SCROLL FOR NEXT