ರಾಜ್ಯ

ಆಪರೇಷನ್ ಆಡಿಯೋ: ಯಡಿಯೂರಪ್ಪ ಬಳಿಕ ತಹಶೀಲ್ದಾರ್ ವಿರುದ್ಧ ದೂರು ದಾಖಲು

Raghavendra Adiga
ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ಶಾಸಕರೊಡನೆ ಮಾತನಾಡಿ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದರೆನ್ನಲಾದ ಆಡಿಯೋ ಟೇಪ್ ಕರ್ನಾಟಕ ಶಾಸನ ಸಭೆಯಲ್ಲಿ ಸದ್ದು ಮಾಡುತ್ತಿರುವಾಗಲೇ ಮೈಸೂರು ತಾಲೂಕಿನ ಸ್ಥಾನಿಕ ತಹಶೀಲ್ದಾರ್ ಟಿ. ರಮೇಶ್ ಬಾಬು ಹಾಗೂ ಇನ್ನೊಬ್ಬ ಅಧಿಕಾರಿ ನಡುವೆ ನಡೆದ ಟೆಲಿಫೋನ್ ಸಂಭಾಷಣೆಯೊಂದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ವಕೀಲ ಪಡುವಾರಹಳ್ಳಿ ರಾಮಕೃಷ್ಣ  ಎನ್ನುವವರು ಇಬ್ಬರು ಅಧಿಕಾರಿಗಳೊಡನೆ ಮಾತುಕತೆ ನಡೆಸಿದ  ಆಡಿಯೋ ಟೇಪ್  ನೊಡನೆ ಸೋಮವಾರ ಉಪ ಕಮೀಷನರ್ ಮೂಲಕ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ "ಇಬ್ಬರೂ ಅಧಿಕಾರಿಗಳು ಕಛೇರಿಯಲ್ಲಿ ಭ್ರಷ್ಟಾಚಾರ ನಡೆಸಲು ಅವಕಾಶ ನಿಡುವಂತಿದೆ. ಅಜತೆಗೆ ಅವರು ಕೆಲವು ಜಾತಿಗಳ ವಿಚಾರವಾಗಿ ಸಹ ಮಾತನಾಡಿದ್ದಾರೆ. ವಕೀಲ ರಾಮಕೃಷ್ಣ  ಸಲ್ಲಿಸಿರುವ ಈ ದೂರಿನ ಪ್ರತಿಯೊಂದು ಪತ್ರಿಕೆಗೆ ಸಹ ದೊರಲಿದ್ದು ಇದರಲ್ಲಿ ಇಬ್ಬರೂ ಭ್ರಷ್ಟಾಚಾರ ನಡೆಸುವ ಕುರಿತು ಸಂಭಾಷಣೆ ನಡೆಸಿದ್ದಾರೆಂದು ಅವರು ವಿವರಿಸಿದ್ದಾರೆ.
SCROLL FOR NEXT