ರಾಜ್ಯ

ಮಡಿಕೇರಿ: ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಅವಮಾನದ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಂದರು!

Raghavendra Adiga
ಮಡಿಕೇರಿ: ಕೊಡಗಿನ ಸಿದ್ದಾಪುರ ಸಮೀಪದ ವಿದ್ಯಾರ್ಥಿನಿಯ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮನ್ನು ಅವಮಾನಿಸಿದ್ದಕ್ಕಾಗಿ ದುಶ್ಕರ್ಮಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಭೀಕರ ಸತ್ಯ ಪೋಲೀಸರ ತನಿಖೆ ವೇಳೆ ಬಯಲಾಗಿದೆ. ಇದೀಗ ಪ್ರಕರಣ ಸಂಬಂಧ ರಂಜಿತ್(21) ಮತ್ತು ಸಂದೀಪ್(30)  ಎಂಬಿಬ್ಬರನ್ನು ಕೊಡಗು ಪೋಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಫೆಬ್ರವರಿ 4ರಂದು ನೆಲ್ಯಹುದಿಕೇರಿಯಿಂದ ಕಾಲೇಜು ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿ ನಿಗೂಢವಾಗಿ ಕಣ್ಮರೆಯಾಗಿದ್ದಳು.ಕಡೆ ಕ್ಷಣದವರೆಗೆ ಆಕೆ ಮುಂಬೈನಲ್ಲಿದ್ದ ತನ್ನ ಸಂಬಂಧಿ ಕಿಶೋರ್ ಎಂಬಾತನೊಡನೆ ಮೊಬೈಲ್ ಮೂಲಕ ಮಾತನಾಡುತ್ತಿದ್ದಳು.ಆದರೆ ಇದ್ದಕ್ಕಿದ್ದಂತೆ ಕರೆ ಕಟ್ ಆಗಿದ್ದು ಆಕೆ ಕಿರುಚಿದ್ದು ಸಹ ಕೇಳಿಸಿತ್ತು. ಆದರೆ ಮನೆಯವರು ಎಷ್ಟೇ ಹುಡುಕಿದರೂ ಯುವತಿಯ ಸುಳಿವು ಮಾತ್ರ ಲಭ್ಯವಾಗಿಲ್ಲ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಕಾಫಿ ತೋಟದ ಕಾರ್ಮಿಕರ ಮಗಳಾಗಿದ್ದ ಈಕೆಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು ವಿದ್ಯಾರ್ಥಿನಿ ನಾಪತ್ತೆ ಹಾಗೂ ಆಕೆಯ ಪತ್ತೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಇದ್ದವು. ಇದೆಲ್ಲದರ ನಡುವೆ ಕಳೆದ ಮೂರು ದಿನಗಳ ನಡುವೆ ಕಾಫಿ ತೋಟದ ಪೊದೆಯಲ್ಲಿ ವಿದ್ಯಾರ್ಥಿನಿ ಬ್ಯಾಗ್ ಮತ್ತು ಶೂ ಪತ್ತೆಯಾಗಿತ್ತು. 
ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಡಿವೈಎಸ್ಪಿ ಸುಂದರ್ ರಾಜ್ ಉಸ್ತುವಾರಿಯಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿದ್ದರು. ಈ ತಂಡ ತೋಟದ ಕೆಲಸಗಾರರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದಾಗ ಪಕ್ಕದ ಕರಡಿಕಾಡು ತೋಟದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ರಂಜಿತ್ ಅಪರಾಧಿ ಎಂಬ ಸುಳಿವು ಲಭ್ಯವಾಗಿತ್ತು.
ರಂಜಿತ್ ವಿಚಾರಣೆ ನಡೆಸಿದಾಗ ಆತನ ಗೆಳೆಯ ಸಂದೀಪ್‍ ಹೆಸರೂ ಬಾಂದಿದ್ದು ಇಬ್ಬರೂ ವಿಚಾರಣೆಗೆ ಒಳಗಾಗಿದ್ದು ಇಬ್ಬರೂ ತಮ್ಮ ಕೃತ್ಯವನ್ನು ಒಪ್ಪಿಕೊಂಡಿಅರು. ಯಾವುದೋ ವಿಚಾರದಲ್ಲಿ ಬಂಧಿತನಾದ ರಂಜಿತ್ ಹಾಗೂ ಆತನ ಸ್ನೇಹಿತನೊಡನೆ ಮೃತ ಯುವತಿ ಜಗಳವಾಡಿದ್ದಳು. ಆ ಸಮಯ ಅವಳೂ ಈ ಇಬ್ಬರನ್ನೂ ಅವಮಾನಿಸಿದ್ದಾಳೆ ಎನ್ನಲಾಗಿದ್ದು ಇದರಿಂದ ಕ್ರೋಧಗೊಂಡ ಇಬ್ಬರೂ ತಾವು ಆಕೆಯ  ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. 
ಅದರಂತೆ ರಂಜಿತ್ ಹಾಗೂ ಸಂದೀಪ್ ಫೆ.4ಕ್ಕೆ ಕಾಲೇಜು ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಕೆರೆ ಮೀಪದಿಂದ ಅಪಹರಿಸಿ ತೋಟಕ್ಕೆ ಕರೆದೊಯ್ದು  ಅತ್ಯಾಚಾರ ನಡೆಸಿದ್ದಾರೆ.ಆಕೆ ಬದುಕಿದರೆ ಅಪಾಯವೆಂದರಿತ ಇಬ್ಬರೂ ತಾವು ತಂದ ಹಗ್ಗದಿಂದ್ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಂದಿದ್ದರು. ಬಳಿಕ ಮೃತದೇಹ ಯಾರಿಗೆ ಕಾಣಬಾರದೆಂದು ಎಮ್ಮೆಗುಂಡಿ ತೋಟದ ಗಣಪತಿ ದೇವಸ್ಥಾನದ ಕೆಳಭಾಗದಲ್ಲಿರುವಬಂಡೆಯೊಂದರ ಕೆಳಗಿನಪೊದೆಯಲ್ಲಿ ಹುದುಗಿಸಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.
SCROLL FOR NEXT