ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು 
ರಾಜ್ಯ

ಗುಂಡಿನ ಮತ್ತೇ ಗಮ್ಮತ್ತು: ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು!

ಪ್ರಪಂಚದ ಅರಿವೇ ಇಲ್ಲದೆ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದವರ ನಶೆಯನ್ನು ಕ್ಷಣ ಮಾತ್ರದಲ್ಲಿ ನಾಗರಾಜ ಇಳಿಸಿದ್ದಾನೆ....

ಶಿವಮೊಗ್ಗ: ಪ್ರಪಂಚದ ಅರಿವೇ ಇಲ್ಲದೆ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದವರ ನಶೆಯನ್ನು ಕ್ಷಣ ಮಾತ್ರದಲ್ಲಿ ಅಲ್ಲಿಗೆ ಬಂದ 'ನಾಗ'ರಾಜ ಇಳಿಸಿದ್ದಾನೆ.
ಹೌದು, ಶಿವಮೊಗ್ಗದ ತೀರ್ಥಹಳ್ಳಿಯ ಕಮ್ಮಾರ್ಡಿ ಗ್ರಾಮದ ವೈನ್ ಶಾಪ್ ನಲ್ಲಿ ಹಾವು ಕಾಣಿಸಿಕೊಂಡು ಅಲ್ಲಿದ್ದವರಿಗೆಲ್ಲಾ ಗಾಬರಿ ಹುಟ್ಟಿಸಿತ್ತು, ಬಾರ್ ನಲ್ಲಿ ಮಧ್ಯದ ಬಾಟಲ್ ಗಳ ನಡುವೆ ಹಾವು ಸೇರಿಕೊಂಡಿತ್ತು. ಇದನ್ನು ನೋಡಿದ ಅಲ್ಲಿನ ಕೆಲಸಗಾರರು, ಮಾಲೀಕರು ಮತ್ತು ಗ್ರಾಹಕರು ಅಲ್ಲಿಂದ ಹೊರ ಓಡಿದ್ದಾರೆ.
ಕೂಡಲೇ ಹಾವು ಹಿಡಿಯುವವರನ್ನು ಕರೆಸಿ, ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಿಸಿದ್ದಾರೆ.ನಾವು ಸ್ಥಳ ತಲುಪಿದಾಗ ಅಲ್ಲಿದ್ದ ಜನ ಕುತೂಹಲದಿಂದ ಕಾಯುತ್ತಿದ್ದರು, ನಾವು ಹಾವನ್ನು ಹಿಡಿದ ನಂತರ ಮತ್ತೆ ಮದ್ಯ ಸೇವನೆ ಮುಂದುವರಿಸಿದರು ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಉರಗ ತಜ್ಞ ಅಜಯ್ ಗಿರಿ ಹೇಳಿದ್ದಾರೆ.
ಫೆಬ್ರವರಿ 11 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಹಾವಿನ ತಲೆ ಬಿಯರ್ ಕ್ಯಾನ್ ಒಳಗಡೆ ಸಿಕ್ಕಿಕೊಂಡಿತ್ತು, ತೀರ್ಥಹಳ್ಳಿಯ ಕಲ್ಮನೆಯಲ್ಲಿ ಈ ಘಟನೆ ನಡೆದಿದ್ದು,  ನಂತರ ಬಿಯರ್ ಕ್ಯಾನ್ ನಿಂದ ಹಾವಿನ ತಲೆ ಹೊರ ತೆಗೆಯಲಾಯಿತು ಎಂದು ಹೇಳಿದ್ದಾರೆ.
ಕಲ್ಮನೆ ಸೇತುವೆ ಬಳಿ ಹಾವಿನ ತಲೆ ಬಿಯರ್ ಕ್ಯಾನ್ ಒಳಗೆ ಸೇರಿಕೊಂಡಿತ್ತು, ಅಲ್ಲಿನ ನಿವಾಸಿಗಳು ನಮಗೆ ಮಾಹಿತಿ ನೀಡಿದರು, ಕೂಡಲೇ ಆಗಮಿಸಿ ಬಿಯರ್ ಕ್ಯಾನ್ ತಳ ಕತ್ತರಿಸಿ ಹಾವು ಸುರಕ್ಷಿತವಾಗಿ ಹೊರಗೆ ಬರುವಂತೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಬೆಳಗಾವಿ: ಬೈಕ್- ಸಾರಿಗೆ ಬಸ್ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು!

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ