ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೊಷಿಸಿದೆ. ತಮ್ಮ ಸಂಸ್ಥೆಯ ವತಿಯಿಂದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಪ್ರತಿಷ್ಟ್ಃಆನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದಾರೆ.
"ನಮಗಾಗಿ, ದೇಶಕ್ಕಾಗಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.ಈ ಕುರಿತು ಪತ್ರಿಕೆಯಲ್ಲಿ ಓದಿದ ಕೂಡಲೇ ಹಣ ನೀಡಬೇಕೆಂದುಕೊಂಡೆ. ಆದರೆ ಹಣಕ್ಕಿಂತ ಯೋಧರ ಜೀವ ಮುಖ್ಯ. ಅದಕ್ಕಾಗಿ ನೋವಿದೆ. ಯೋಧರ ಕುಟುಂಬಕ್ಕೆ ನಮ್ಮ ಸಂಸ್ಥೆಯಿಂಡ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇನೆ." ಸುಧಾಮೂರ್ತಿ ಹೇಳಿದ್ದಾರೆ.
ಪುಲ್ವಾಮಾದಲ್ಲಿ ಗುರುವಾರ ನಡೆದಿದ್ದ ಉಗ್ರ ದಾಳಿಯಲ್ಲಿ ನಲವತ್ತಕ್ಕೆ ಹೆಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ಬಳಿಕ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಸ್ಥಾನಮಾನ ಹಿಂಪಡೆದಿದ್ದಲ್ಲದೆ ಪಾಕ್ ವಸ್ತುಗಳ ಮೇಲಿನ ಆಮದು ಸುಂಕ ಶೇ.200ಕ್ಕೆ ಏರಿಕೆ ಮಾಡಿದೆ.
"ರಾಷ್ಟ್ರಕ್ಕೆ ಬಲಿದಾನ ಮಾಡಿದವರ ಜತೆ ನಾನಿದ್ದೇನೆ. ಮಂಡ್ಯ ಯೋಧ ಗುರು ಕುಟುಂಬದವರನ್ನು ಭೇಟಿ ಂಆಡಿ ಸಾಂತ್ವನ ಹೇಳಲಿದ್ದೇನೆ.ನನಗೆ ಪ್ರಚಾರ ಬೇಕಾಗಿಲ್ಲ. ಆದರೆ ನನ್ನ ಸಂಸ್ಥೆಯ ಕೆಲಸದಿಂದ ಪ್ರೇರಣೆಯಾಗಿ ಬೇರೆಯವರೂ ಸಹಾಯ ಮಾಡಿದರೆ ಅದೇ ಸಾರ್ಥಕ." ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಯೋಧ ಗುರು ಕುಟುಂಬಕ್ಕೆ 25 ಲಕ್ಷ ಪರಿಹಾರ ಜತೆಗೆ ಪತ್ನಿಗೆ ಸರ್ಕಾರಿ ನ್ಪೌಕರಿ ನೀಡುವುದಾಗಿ ಹೇಳಿದ್ದಾರೆ.. ರಿಲಯನ್ಸ್ ಫೌಂಡೇಶನ್ ಸಂಸ್ಥೆಯು ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವ ಹಾಗೂ ಕುಟುಂಬಗಳ ಜೀವನ ನಿರ್ವಹಣೆ ಜವಾಬ್ದಾರಿ ಹೊತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos