ರಾಜ್ಯ

ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ನಕ್ಸಲ್ ಕೃತ್ಯ ಶಂಕೆ

Raghavendra Adiga
ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ  ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್‍ನಲ್ಲಿ ನಡೆದಿದೆ.
ನಕ್ಸಲ್ ಪೀಡಿತ ಪ್ರದೇಶವಾಗಿರುವ ಮೂಡಿಗೆರೆ ತಾಲೂಕಿನ ಬಸರೀಕಲ್ ಚೆಕ್‍ಪೋಸ್ಟ್ ನಲ್ಲಿ ಈ ಘಟನೆ ವರದಿಯಾಗಿದ್ದು ಇದು ನಕ್ಸಲ್ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಪೆಟ್ರೋಲ್ ಬಾಂಬೆಸೆದ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.ಆರು ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು  ಅದರಲ್ಲೊಂದು ಬೆಂಕಿ ಹತ್ತಿಕೊಂಡಿದ್ದು ರಟ್ಟಿನ ಪೆಟ್ಟಿಗೆಯಲ್ಲಿದ್ದ ಕಾಗದ ಪತ್ರಗಳು ಸುಟ್ಟು ಹೋಗಿದೆ.
ಬಾಟಲಿ ಶಬ್ದ ಕೇಳಿದ ಸಿಬ್ಬಂದಿಗಳು ಠಾಣೆಯಿಂದ ಹೊರಕ್ಕೆ ಓಡಿ ಬಂದಿದ್ದರೂ ಕೃತ್ಯ ಎಸಗಿದವರ ಪತ್ತೆಹಚ್ಚಲಾಗಿಲ್ಲ. 
ಘಟನೆ ಕುರಿತು ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 
SCROLL FOR NEXT