ರಾಜ್ಯ

ಮಳೆಯ ಕೊರತೆಯಿಂದ ಕರ್ನಾಟಕದ ಅಣೆಕಟ್ಟುಗಳಲ್ಲಿ ತಗ್ಗಿದ ನೀರಿನ ಮಟ್ಟ

Sumana Upadhyaya
ಬೆಂಗಳೂರು: ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಈ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯುಂಟಾಗಲಿದೆ.
ರಾಜ್ಯದ 47 ಪಟ್ಟಣಗಳು ಮತ್ತು 625 ಗ್ರಾಮಗಳ ಜನರು ಕಾವೇರಿ ನದಿಯನ್ನು ತಮ್ಮ ದಿನನಿತ್ಯದ ಅಗತ್ಯಗಳಿಗೆ ನಂಬಿಕೊಂಡಿದ್ದಾರೆ. ಆದರೆ ಜಲಾಶಯಗಳಲ್ಲಿ ನೀರಿನ ಮಟ್ಟ ನಿಗದಿತ ಮಟ್ಟಕ್ಕಿಂತ ಕಡಿಮೆಯಿದೆ.
ಈ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಜಿಎಸ್ ಶ್ರೀನಿವಾಸ ರೆಡ್ಡಿ, ನಮ್ಮ ರಾಜ್ಯದ ಅಣೆಕಟ್ಟುಗಳಲ್ಲಿ ಸುಮಾರು 41 ಟಿಎಂಸಿ ನೀರಿದ್ದು ಸದ್ಯದ ಮಟ್ಟಿಗೆ ಕುಡಿಯಲು ಸಾಕಷ್ಟು ನೀರು ಇದೆ. ಕುಡಿಯುವ ನೀರಿಗೆ ಅಣೆಕಟ್ಟುಗಳಲ್ಲಿ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಆದೇಶ ನೀಡಿದೆ. ಹೆಚ್ಚುವರಿ ನೀರು ಇದ್ದರೆ ಮಾತ್ರ ನೀರಾವರಿಗೆ ಕೊಡಲು ಸಾಧ್ಯ ಎಂದು ಹೇಳಿದರು.
SCROLL FOR NEXT