ರಾಜ್ಯ

ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ: ಎಂಬಿ ಪಾಟೀಲ್

Raghavendra Adiga
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಸಾಹಿತಿ ಎಂಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದ ದಲ್ಲಿ ಉನ್ನತ ಮಟ್ಟದ ಪೋಲೀಸ್ ಅಧಿಕಾರಿಗಳ ಸಭೆಯಲ್ಲಿ ಇಲಾಖೆಯಲ್ಲಿನ ಸಮಸ್ಯೆಗಳು, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಬಳಿಕ ಮಾದ್ಯಮದವರೊಡನೆ ಮಾತನಾಡಿದ ಸಚಿವ ಪಾಟೀಲ್ "ಗೌರಿ, ಕಲ್ಬುರ್ಗಿ ಹತ್ಯೆಯ ಕುರಿತು ತನಿಖೆಗಳು ನಡೆದಿದೆ. ಎರಡೂ ಪ್ರಕರಣಗಳಿಗೆ ಶೀಘ್ರವೇ ತಾರ್ಕಿಕ ಅಂತ್ಯ ದೊರಕುತ್ತದೆ. ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 113 ಜನ ಅಕ್ರಮ ವಲಸಿಗರನ್ನು ಈಗಾಗಲೇ ಗುರುತಿಸಲಾಗಿದ್ದು ಇಂತಹವರ ಬಗ್ಗೆ ನಿಗಾ ವಹಿಸಲುಸೂಚಿಸಿದ್ದೇನೆ,ಅಪರಾಧಿ ಯಾವ ಜಾತಿ, ಧರ್ಮ ಎಂದು ಪರಿಗಣಿಸುವುದು ತಪ್ಪು, ಯಾವುದೇ ವ್ಯಕ್ತಿಯಾದರೂ ಅಪರಾಧಿಯಾಗಿದ್ದರೆ ಶಿಕ್ಷೆ ಆಗಲೇಬೇಕು ಎಂಬುದಾಗಿ ಅಭಿಪ್ರಾಯಪಟ್ಟರು.
ಅಪರಾಧಗಳ ನಿಯಂತ್ರಣ, ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾಗಿಯೂ ಸಚಿವರು ಮಾದ್ಯಮ ಮಿತ್ರರಿಗೆ ವಿವರಿಸಿದ್ದಾರೆ.
SCROLL FOR NEXT