ರಾಜ್ಯ

ಹೊಸ ವರ್ಷಕ್ಕೆ ಭರ್ಜರಿ ಪಾರ್ಟಿ: ರಾಜ್ಯದಲ್ಲಿ ಒಂದೇ ದಿನ ರೂ.70 ಕೋಟಿ ಮೌಲ್ಯದ ಲಿಕ್ಕರ್ ಮಾರಾಟ!

Sumana Upadhyaya

ಬೆಂಗಳೂರು: ಹೊಸ ವರ್ಷ 2019ನ್ನು ಕರ್ನಾಟಕದ ಜನತೆ ಮೋಜು-ಮಸ್ತಿನಿಂದ ಸ್ವಾಗತಿಸಿದ್ದಾರೆ. ಅದಕ್ಕೆ ಮದ್ಯದ ಮಾರಾಟದಲ್ಲಿ ಏರಿಕೆಯಾಗಿದ್ದು ಕಂಡುಬರುತ್ತಿದೆ. ಡಿಸೆಂಬರ್ 31ರಂದು ಸುಮಾರು 70 ಕೋಟಿ ರೂಪಾಯಿ ವಹಿವಾಟು ಅಬಕಾರಿ ಇಲಾಖೆಯಲ್ಲಿ ನಡೆದಿದೆ. ದೇಶೀಯ ಲಿಕ್ಕರ್ ಮತ್ತು ಬಿಯರ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ನೀಡಿದ ಮಾಗಿತಿ ಪ್ರಕಾರ ಈ ವರ್ಷ ಹೊಸ ವರ್ಷಕ್ಕೆ ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಆದಾಯ ಹೆಚ್ಚಳವಾಗಿದೆ.

ರಾಜ್ಯಾದ್ಯಂತ ಸುಮಾರು 10,400 ಲಿಕ್ಕರ್ ಮಳಿಗೆಗಳಿವೆ. ಅಬಕಾರಿ ಇಲಾಖೆಯ ಅಂಕಿಅಂಶ ಪ್ರಕಾರ, ಭಾರತದಲ್ಲಿ ನಿರ್ಮಾಣವಾದ ಲಿಕ್ಕರ್(ಐಎಂಎಲ್) 3.83 ಲಕ್ಷ ಪೆಟ್ಟಿಗೆಗಳು ಮತ್ತು 1.48 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಇತರ ದಿನಗಳಲ್ಲಿ ಕರ್ನಾಟಕದಲ್ಲಿ ಸರಾಸರಿ 1.75 ಲಕ್ಷ ಪೆಟ್ಟಿಗೆಗಳು ಲಿಕ್ಕರ್ ಮತ್ತು 60 ಸಾವಿರ ಬಿಯರ್ ಗಳು ಮಾರಾಟವಾಗುತ್ತವೆ.

ಈ ವರ್ಷ ಲಿಕ್ಕರ್ ಗಳ ಬೆಲೆ ಹೆಚ್ಚಳವಾಗಿದೆ. ಆದರೂ ಖರೀದಿಸುವ ಗ್ರಾಹಕರಲ್ಲಿ ಹಿಂದೇಟು ಕಾಣಲಿಲ್ಲ. ಹೀಗಾಗಿ ಇಲಾಖೆಗೆ ಹೆಚ್ಚು ಆದಾಯ ಬಂದಿದೆ. ಈ ಹಣಕಾಸು ವರ್ಷದಲ್ಲಿ 19,750 ಕೋಟಿ ರೂಪಾಯಿ ನಿರೀಕ್ಷೆಯಿದ್ದು ಡಿಸೆಂಬರ್ ಕೊನೆಯ ಹೊತ್ತಿಗೆ 15 ಸಾವಿರ ಕೋಟಿ ರೂಪಾಯಿ ದಾಟಿದೆ. ಮುಂದಿನ ಮೂರು ತಿಂಗಳಲ್ಲಿ ಗುರಿ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕೆಲವು ಲಿಕ್ಕರ್ ಗಳ ಬೆಲೆಯನ್ನು ರಾಜ್ಯ ಸರ್ಕಾರ ಶೇಕಡಾ 8ರಷ್ಟು ಹೆಚ್ಚಿಸಿದೆ. ಹೊಸ ಮೈತ್ರಿ ಸರ್ಕಾರ ಬಂದ ಮೇಲೆ ಎಲ್ಲಾ 18 ಲಿಕ್ಕರ್ ಗಳ ಬೆಲೆ ಹೆಚ್ಚುವರಿ ಶೇಕಡಾ 4ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಆದಾಯದಲ್ಲಿ ಹೆಚ್ಚಳವಾಗಿರಬಹುದು ಎನ್ನುತ್ತಾರೆ ಅಬಕಾರಿ ಇಲಾಖೆಯ ಆಯುಕ್ತ ವಿ ಯಶವಂತ್.

SCROLL FOR NEXT