ರಾಜ್ಯ

ಬೆಂಗಳೂರಿನಲ್ಲಿವೆ 15 ವರ್ಷ ತುಂಬಿದ 19.82 ಲಕ್ಷ ವಾಹನಗಳು !

Shilpa D
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ವರ್ಷದ ಹಿಂದೆ ನೋಂದಣಿಯಾದ ಸುಮಾರು 19,82,199 ವಾಹನಗಳಿವೆ ಎಂದು ಲೋಕಸಭೆಯಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ರಾಜ್ಯಸಚಿವ  ಮನ್ಸುಕ್ ಎಲ್ ಮಾಂಡವೀಯಾ ಹೇಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್, ಬೆಂಗಳೂರಿನಲ್ಲಿ ಸುಮಾರು 16 ಲಕ್ಷ ವಾಹನಗಳು 15 ವರ್ಷ ಹಳೇಯದಾಗಿಿವೆ, ಇದರ ಬಗ್ಗೆ ಕೇಂದ್ರಸರ್ಕಾರಕ್ಕೆ ಅರಿವಿದೆಯೇ ಎಂದು  ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡದ್ದಾರೆ.
ವಾಯು ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಂದಾಗಿ ಬದಲಿ ಇಂಧನ, ಪರಿಸರ ಪ್ರೇಮಿ ವಾಹನ, ಮಾಲಿನ್ಯತಪಾಸಣೆ ಗುಣಮಟ್ಟ ಸೇರಿದಂತೆ ವಿವಿಧ ಕಾನೂನುಗಳನ್ನು ಜಾಾರಿಗೆ ತರಲಾಗಿದ್ದು, ಭಾರತದ ಗಾಳಿಯ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ 15 ವರ್ಷ ತುಂಬಿದ ವಾಹನಗಳನ್ನು ತೆಗೆದುಹಾಕಲು ಕಾನೂನು ಜಾಾರಿಗೆ ತಂದು ಆದೇಶ ಹೊರಡಿಸಿದರೇ ಮಾತ್ರ ನಾವು ಅದನ್ನು ಮಾಡಲು ಸಾಧ್ಯ, ಕೇಂದ್ರದ ಆದೇಶವಿಲ್ಲದೇ ನಾವು ಏನನ್ನೂಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT