ರಾಜ್ಯ

ಮಹಿಳೆಯರಿಗೆ ಸಿಹಿ ಸುದ್ದಿ: ಎರ್'ಪೋರ್ಟ್ ನಲ್ಲಿ ಮಹಿಳೆಯರಿಂದ ಚಾಲಿತ ಪಿಂಕ್ ಟ್ಯಾಕ್ಸಿ ಸೇವೆ ಆರಂಭ

Manjula VN
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಯಾಣಿಕರಿಗಾಗಿಯೇ ಮಹಿಳೆಯರಿಂದ ಚಾಲಿತ ಪಿಂಕ್ ಟ್ಯಾಕ್ಸಿ ಸೇವೆ ಸೋಮವಾರದಿಂದ ಆರಂಭಗೊಂಡಿದೆ. 
ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಸುಭದ್ರ ದೃಷ್ಟಿಯಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಬಿಐಎಎಲ್ ಸಂಸ್ಥೆ ಜಂಟಿ ಸಹಯೋಗದಲ್ಲಿ ಈ ಸೇವೆಯನ್ನು ಆರಂಭಿಸಿದೆ. 
ಮಹಿಳಾ ಚಾಲಕರು ಹಲವಾರು ಭಾಷೆಗಳಲ್ಲಿ ಪ್ರಾವಿಣ್ಯತೆ ಹಾಗೂ ಸ್ಥಳೀಯ ಮಾಹಿತಿ ಪಡೆದಿದ್ದಾರೆ. ವಾಹನಗಳಲ್ಲಿ ಆಧುನಿಕ ತಂತ್ರಜ್ಞಾನದ ಜಿಪಿಆರ್'ಎಸ್ ಟ್ರ್ಯಾಕಿಂಗ್, ಎಸ್ಒಎಸ್ ಸ್ವಿಚ್ ಮುಂತಾದವುಗಳು ಸೇರಿವೆ. ಅಲ್ಲದೆ, ಮಹಿಳಾ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಬಿಐಎಎಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮಾರರ್ ತಿಳಿಸಿದ್ದಾರೆ. 
ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮಾತನಾಡಿ, ಈ ಹೊಸ ವ್ಯವಸ್ಥೆಯಿಂದ ಚಾಲನಾ ಪರವಾನಗಿ ಪಡೆದ ಮಹಿಳೆಯರಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲಿದೆ. ಅಲ್ಲದೆ, ಈ ಮಹಿಳಾ ಟ್ಯಾಕ್ಸಿಯಲ್ಲಿ ಹಗರು ಪ್ರತಿ ಕಿ.ಮೀಗೆ 21.50 ಹಾಗೂ ರಾತ್ರಿ ಎರಡು ರು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. 
SCROLL FOR NEXT