ರಾಜ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಏಪ್ರಿಲ್ ನಲ್ಲಿ ಉದ್ಘಾಟನೆ

Sumana Upadhyaya

ಬೆಂಗಳೂರು: ಮುಂದಿನ ಏಪ್ರಿಲ್ 1ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಹೋಗುವ ಎಲ್ಲಾ ವಾಹನಗಳ ದಾರಿಯನ್ನು ಬದಲಾಯಿಸಿ ಈಗಿರುವ ಮುಖ್ಯ ರಸ್ತೆಗೆ ಸಮಾನಾಂತರವಾಗಿ ನಿರ್ಮಿಸಲಾಗುತ್ತಿರುವ ಹೊಸ ರಸ್ತೆಯಲ್ಲಿ ಸಂಚರಿಸಲಿದೆ.

ಈಗಿರುವ ಹೊಸ ಮುಖ್ಯ ಲಭ್ಯ ರಸ್ತೆ(MAR), ಹೆದ್ದಾರಿಯಿಂದ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತಿದ್ದು ಅದು ರಸ್ತೆ ವಿಸ್ತರಣೆ ಹಿನ್ನಲೆಯಲ್ಲಿ ಏಪ್ರಿಲ್ ನಿಂದ ಮುಚ್ಚಲಿದೆ.

ಈಗಿರುವ ಚತುಷ್ಪಥದಿಂದ ದಶಪಥದವರೆಗೆ ಮುಖ್ಯ ಲಭ್ಯತೆ ರಸ್ತೆಯನ್ನು ವಿಸ್ತರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.

ಸಂಚಾರವನ್ನು ದಕ್ಷಿಣ ಲಭ್ಯತಾ ರಸ್ತೆ(Southern Access Road)ಗೆ ಬದಲಿಸಲಾಗಿದೆ.
ಕೆಂಪೇಗೌಡ ಏರ್ ಪೋರ್ಟ್ ಗೆ ಹೋಗುವವರು ಮೊದಲು ಬಲ ರಸ್ತೆ ನಂತರ ಸುತ್ತುಹಾಕಿ ಎಡರಸ್ತೆಯಲ್ಲಿ ಬಂದು ಹೊಸ ರಸ್ತೆಯನ್ನು ಬಳಸಬೇಕಾಗಿದೆ. ದಕ್ಷಿಣ ಭಾಗದ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಏಪ್ರಿಲ್ 1ರಿಂದ ಸಂಚಾರ ಆರಂಭ ಮಾಡಲಿದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್ ತಿಳಿಸಿದ್ದಾರೆ.

SCROLL FOR NEXT