ರಾಜ್ಯ

ರೈಲ್ವೆ ಗೇಟ್ ದಾಟುವಾಗಲೇ ಧಿಡೀರನೇ ಆಗಮಿಸಿದ ಎಂಜಿನ್! ಕೂದಲೆಳೆಯಲ್ಲಿ ತಪ್ಪಿತು ಅನಾಹುತ

Raghavendra Adiga
ಧಾರವಾಡ: ಬಸ್ ಚಾಲಕನ ಸಮಯಪ್ರಜ್ಞೆಯ ಕಾರಣ ರೈಲಿನಡಿ ಸಿಕ್ಕು ಸಾವನ್ನಪ್ಪಬೇಕಾಗಿದ್ದ 40 ಪ್ರಯಾಣಿಕರ ಜೀವ ಉಳಿದಿರುವ ಘಟನೆ ಧಾರವಾಡ ಹೊರವಲಯದ ಶ್ರೀನಗರ ರೈಲ್ವೆ ಗೇಟ್ ಸಮೀಪ ನಡೆದಿದೆ.
ಗುರುವಾರ ಬೆಳಿಗ್ಗೆ ಶ್ರೀನಗರ  ಸರ್ಕಲ್ ನಲ್ಲಿನ ಮಾನವರಹಿತ ರೈಲ್ವೆ ಕ್ರಾಸಿಂಗ್ ಸಮೀಪ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್ ಸಂಚರಿಸುತ್ತಿತ್ತು. ಆಗ ಏಕಾಏಕಿ ರೈಲ್ವೆ ಎಂಜಿನ್ ಒಂದು ಆಗಮಿಸಿದೆ. ಇದನ್ನು ನೋಡಿದ ಚಾಲಕ ತಕ್ಷಣ ಬಸ್ ನ ವೇಗ ಹೆಚ್ಚಿಸಿ ಬಿರುಸಾಗಿ ಓಡಿಸಿದ್ದಾನೆ. ಇದರಿಂದ ಬಸ್ ರೈಲಿನ ಎಂಜಿನ್ ಗೆ ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ನೈಋತ್ಯರೈಲ್ವೆ (SWR) ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಯಾಣಿಕರನ್ನು ಉಳಿಸುವಲ್ಲಿ ಚಾಲಕನ ಧೈರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.
ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ  ಅಸಮಾಧಾನ ವ್ಯಕ್ತಪಡಿಸಿದ ಪ್ರಯಾಣಿಕರು.ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕ ರೈಲಿನ ಲೋಕೊಪೈಲಟ್‍ನ ಅಜಾರೂಕತೆಗೆ ಕಿಡಿಕಾರಿದ್ದಾರೆ.
ಆದಾಗ್ಯೂ, ರೈಲ್ವೆ ಕ್ರಾಸಿಂಗ್ನಲ್ಲಿ ಸಿಬ್ಬಂದಿ ರೈಲಿನ ಆಗಮನದ ಕುರಿತು ಯಾವುದೇ ಸಂಕೇತವನ್ನು ಸ್ವೀಕರಿಸಲಿಲ್ಲ ಎಂದು ಹೇಳಿದರು. ಬಸ್ ಬರುವುದನ್ನು ಕಂಡಾಗ ಅವರು ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್, ರೈಲು ಬರುವುದರೊಳಹ್ಗೆ ಬಸ್ ಹಳಿಯಿಂದ ದೂರ ಸಾಗಿತ್ತು. ಇದು ನನ್ನ ವೃತಿ ಜೀವನದಲ್ಲಿ ನಡೆದ ಈ ಬಗೆಯ ಮೊದಲ ಅನುಭವ ಎಂದು ಅವರು ವಿವರಿಸಿದ್ದಾರೆ.
SCROLL FOR NEXT