ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ: ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಉತ್ತಮ್ ಭೊಂಗಲೆ ಮೃತ ದುರ್ದೈವಿ, ಭಾನುವಾರ ರಾತ್ರಿ ಉತ್ತಮ್ ಗೆ ಚಾಕುವಿನಿಂದ ಇರಿಯಲಾಗಿತ್ತು, ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಆತ ಸಾವನ್ನಪ್ಪಿದ್ದಾನೆ,
ಕೇಶ್ವಾಪುರ ಪೊಲೀಸರು ಸುನೀಲ್, ಸನ್ನಿ ಮೊತ್ ಕುರಿಸ ಮತ್ತು ಮಿಚಲ್ ಕುಪ್ಪಲ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಈ ಎಲ್ಲಾ ಆರೋಪಿಗಳು ಮಂಟೂರು ಗ್ರಾಮದವರಾಗಿದ್ದಾರೆ,
ಕೇಶ್ವಾಪುರ ನಿವಾಸಿ, ಉತ್ತಮ್ ರೈಲ್ವೆ ಗ್ರೌಂಡ್ಸ್ ನಲ್ಲಿರುವ ಡ್ಯಾನ್ಸ್ ಕಾರ್ಯಕ್ರಮಕ್ಕೆ ತನ್ನ ಸ್ನೇಹಿತನ ಜೊತೆ ತೆರಳಿದ್ದ, ಈ ವೇಳೆ ತನ್ನ ವಾಹನವನ್ನು ಪಾರ್ಕಿಂಗ್ ಮಾಡುವಾಗ, ಸುನೀಲ್ ಎಂಬುವನ ಬೈಕ್ ಗೆ ಡಿಕ್ಕಿ ಹೊಡೆದಿದ್ದ.
ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಯಿತು, ಈ ವೇಳೆ ಸುನೀಲ್ ಸ್ನೇಹಿತರು ಆಯುಧಗಳನ್ನು ತಂದಿದ್ದರು, ಉತ್ತಮ್ ಗೆ ಕತ್ತಿಯಿಂದ ಇರಿದಿದ್ದರು, ಹೀಗಾಗಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದರು. ಆರೋಪಿಗಳು ಬಂದಿದ್ದ ಬೈಕ್ ಗೆ ಯಾವುದೇ ರಿಜಿಸ್ಟಾರ್ ನಂಬರ್ ಇರಲಿಲ್ಲ. ಆಧಾರ್ ಕಾರ್ಡ್ ನಂಬರ್ ನಿಂದ ಪೊಲೀಸರು ಆತನ ವಿಳಾಸ ಪತ್ತೆ ಹಚ್ಚಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.