ಸಂಗ್ರಹ ಚಿತ್ರ 
ರಾಜ್ಯ

ಸುಳ್ವಾಡಿ, ಯಾದಗಿರಿ ಬಳಿಕ ಮತ್ತೊಂದು ದುರಂತ! ವಿಷ ಹಾಕಿದ್ದ ಕಾಫಿ ಸೇವಿಸಿ ತಾಯಿ-ಮಗಳು ದುರ್ಮರಣ

ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ......

ಚಿಕ್ಕಬಳ್ಳಾಪುರ: ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ತಾಯಿ, ಮಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಲಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.
 ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದ ಅಕ್ಕಲಮ್ಮ(80) ಮತ್ತು ನರಸಮ್ಮ(60) ಕಾಫಿ ಕುಡಿದು ಸಾವನ್ನಪ್ಪಿದ ದುರ್ದೈವಿಗಳು.ಇದೇ ವೇಳೆ ಕಾಫಿ ಸೇವನೆ ಮಾಡಿದ್ದ ಮ್ಮೊಮ್ಮಕ್ಕಳಾದ ಅರ್ಜುನ್ (7) ,ಆರತಿ(4) ಜೀವಭಯದಿಂದ ಪಾರಾಗಿದ್ದಾರೆ.
ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕಲಮ್ಮಮತ್ತು ನರಸಮ್ಮ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾರೆ. 
ಇವರು ತಮ್ಮ ಗ್ರಾಮದ ಅಂಗಡಿಯೊಂದರಿಂದ ಕಾಫಿಪುಡಿ ಖರೀದಿಸಿದ್ದರು.ಶನಿವಾರ ಬೆಳಿಗ್ಗೆ ಎಲ್ಲರೂ ಕಾಫಿ ತಯಾರಿಸಿ ಸೇವಿಸಿದ್ದಾರೆ.ಇದಾಗಿ ತುಸು ಸಮಯಕ್ಕೆ ಎಲ್ಲರಿಗೆ ವಾಂತಿಯಾಗಿದೆ. ಎಲ್ಲರೂ ಅಸ್ವಸ್ಥರಾಗಿದ್ದು ಎಲ್ಲರನ್ನೂ ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರಿಸ್ಥಿತಿ ವಿಷಮಿಸಿದ್ದ ಕಾರಣ ವೈದ್ಯರು ರೋಗಿಗಳನ್ನು ಕೋಲಾರದ ಆಸ್ಪತ್ರೆಗೆ ಸಾಗಿಸಲು ಹೇಳಿದ್ದರು. ಆದರೆ ಅಷ್ಟರಲ್ಲೇ ಅಕ್ಕಲಮ್ಮಮತ್ತು ನರಸಮ್ಮ ಸಾವನ್ನಪ್ಪಿದ್ದರು. ಅದೇ ಕಾಫಿ ಸೇವಿಸಿದ್ದ ಅರ್ಜುನ್ ಹಾಗೂ ಆರತಿ ಅಪಾಯದಿಂದ ಪಾರಾಗಿದ್ದಾರೆ. ಕಾಫಿಯಲ್ಲಿ ವಿಷದ ಅಂಶವಿದೆ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. 
ಘಟನೆಯಿಂದ ಬತ್ತಲಹಳ್ಳಿ ಗ್ರಾಮಸ್ಥರು ಆತಂಕದಲ್ಲಿದ್ದು ಘಟನೆ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT