ರಾಜ್ಯ

ಚಿತ್ರ ವರದಿ: ಶಿವಕುಮಾರ ಶ್ರೀಗಳಿಗೂ, ಧರ್ಮಸ್ಥಳಕ್ಕೂ ಅವಿನಾಭಾವ ನಂಟು..!

Raghavendra Adiga
ಧರ್ಮಸ್ಥಳ: ಸಿದ್ದಗಂಗೆಯ ತ್ರಿವಿಧ ದಾಸೋಹಿ ಶಿ ಶಿವಕುಮಾರ ಸ್ವಾಮೀಜಿಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿತ್ತು. ಶ್ರೀಗಳು ಧರ್ಮಸ್ಥಳದೊಡನೆ ಒಂದೆರಡಲ್ಲ 75 ವರ್ಷಕ್ಕೆ ಹಿಂದಿನಿಂದ ನಂಟು ಹೊಂದಿದ್ದರು.
ಶ್ರೀಗಳ ಅಗಲಿಕೆ ಕುರಿತು ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ "ಶ್ರೀಗಳ ದೇಹತ್ಯಾಗಕ್ಕೆ ನಾವು ದುಃಖಪಡಬೇಕಿಲ್ಲ. ಅವರು ಲೋಕಕ್ಲ್ಯಾಣ ಮಾಡಿದವರು.ಜನಕಲ್ಯಾಣದ ಮೂಲಕ ಅವರು ನೇರವಾಗಿ ಸ್ವರ್ಗಾರೋಹಣ ಮಾಡುತ್ತಿದ್ದಾರೆ.ಧರ್ಮ, ನ್ಯಾಯ ಸತ್ಯದಲ್ಲಿ ಬದುಕಿ ಲೋಕಕ್ಕೆ ಬೇಕಾದ ಹಿತವನ್ನು ನೀಡಿರುವ ಸ್ವಾಮೀಜಿಗಳು ನೇರವಾಗಿ ನಡೆದು ಸ್ವರ್ಗಾರೋಹಣ ಮಾಡಿದ್ದಾರೆ ಎಂದು ನಾನು ಸಂಪೂರ್ಣವಾಗಿ ನಂಬಿದ್ದೇನೆ" ಎಂದರು.
ಶಿವಕುಮಾರ ಸ್ವಾಮಿಗಳು ವೀರೇಂದ್ರ ಹೆಗ್ಗಡೆ ಅವರ ತಂದೆ ಕಾಲದಲ್ಲಿ ಸಹ ಧರ್ಮಸ್ಥಳಕ್ಕೆ ಆಗಮಿಸಿದ್ದರು.ರತ್ನವರ್ಮ ಹೆಗ್ಗಡೆ ಹಾಗೂ ಅವರ ತಂದೆ ಮಂಜಯ್ಯ ಹೆಗ್ಗಡೆ ಕಾಲದಲ್ಲಿ ಶುಇವಕುಮಾರ ಶ್ರೀಗಳು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು.
1969 ಮತ್ತು 1970ರಲ್ಲಿ ಧರ್ಮಸ್ಥಳ ಸಮೀಪದ ಉಜಿರೆಗೆ ಭೇಟಿ ಕೊಇದ್ದ ಸಿದ್ದಗಂಗಾ ಶ್ರೀಗಳು ಜಿರೆಯಲ್ಲಿ ಎಸ್​​ಡಿಎಂ ಕಾಲೇಜು ಕಟ್ಟಡ ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳೆರಡನ್ನೂ ನೆರವೇರಿಸಿದ್ದರು. ಹಾಗೆಯೇ ವೀರೇಂದ್ರ ಹೆಗ್ಗಡೆಯವರು ಸಹ ಅನೇಕ ಬಾರಿ ತುಮಕೂರಿಗೆ ತೆರಳಿ ಸಿದ್ದಗಂಗಾ ಮಠದ ಸ್ವಾಮೀಜಿ ದರ್ಶನ ಪಡೆದಿದ್ದರು.
SCROLL FOR NEXT