ರಾಜ್ಯ

ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!

Raghavendra Adiga
ಮೈಸೂರು: ಸೋಮವಾರ ಶಿವೈಕ್ಯರಾದ 111 ವರ್ಷದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ ಕಾಯಕದಿಂದ ವಿಶ್ವಮಾನ್ಯತೆ ಗಳಿಸಿದ್ದವರು. ಇಂತಹಾ ಯೋಗಿಗಳಿಗೆ ಸಹ ಜೀವ ಬೆದರಿಕೆಗಳು ಬಂದಿತ್ತು ಎನ್ನುವುದು ವಿಚಿತ್ರವಾದರೂ ನಿಜ!
2008ರಲ್ಲಿ ಮೈಸೂರಿನ ವಿಶ್ವವಿಖ್ಯಾತ ದಸರಾ ಉತ್ಸವ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ದಸರಾ ಉದ್ಘಾಟನೆಗಾಗಿ ಶ್ರೀಗಳು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ನವರಾತ್ರಿ ಉತ್ಸವ ಉದ್ಘಾಟನೆಗೆ ಒಪ್ಪಿಕೊಂಡ ಶ್ರೀಗಳಿಗೆ ಆ ವೇಳೆ ಎರಡು ಬಾರಿ ಬೆದರಿಕೆ ಪತ್ರi\ಗಳು ಬಂದಿದ್ದವು.
ಸಿದ್ದಗಂಗಾ ಮಠವು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೆದುರು ತಮಗೆ ಬಂದಿದ್ದ ಬೆದರಿಕೆ ಪತ್ರಗಳನ್ನು ಬಹಿರಂಗ ಮಾಡಿತ್ತು. ದಸರಾ ಉತ್ಸವ ಅಂತ್ಯವಾದ ಬಳಿಕ ಸ್ವಾಮೀಜಿ ಈ ಪತ್ರಗಳನ್ನು ಬಹಿರಂಗಪಡಿಸಿದ್ದರು. ಶತಮಾನವನ್ನು ಕಂಡಿದ್ದ ಶ್ರೀಗಳು ಮತ್ತು ಶಿವರಾತ್ರಿ ದೇಶಿಕೇಂದ್ರರಿಬ್ಬರೂ ಆ ವೇಳೆ ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದ ಭಕ್ತ ಜನರಿಗೆ ಹರಸಿದ್ದರು.
"ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳಬಾರದು ಎಂದು ಅನಾಮಧೇಯ ಪತ್ರವೊಂದು ಬಂದಿತ್ತು ಅದರಲ್ಲಿ ಶ್ರೀಗಳಿಗೆ ಬೆದರಿಕೆ ಹಾಕಲಾಗಿತ್ತು. ಆದರೆ ಸಿದ್ದಗಂಗಾ ಶ್ರೀಗಳು ಅದಕ್ಕೆ ಸೊಪ್ಪು ಹಾಕದೆ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದರು ಮತ್ತು ಹಾಗೆಯೇ ಮಾಡಿದರು." ಸುತ್ತೂರು ಶ್ರೀಗಳು ವಿವರಿಸಿದ್ದಾರೆ.
SCROLL FOR NEXT